
ಪ್ರಮುಖ ಸುದ್ದಿ
ಭಾರತ ಸೇವಾದಳ ಮಿಲಾಪ್ ಶಿಬಿರ : ನಾಯಕತ್ವದ ಗುಣ ಬೆಳೆಸಿಕೊಳ್ಳಿ : ಶಿಕ್ಷಣಾಧಿಕಾರಿ ಗಾಯತ್ರಿ ಕರೆ
ರಾಜ್ಯ(ಮಡಿಕೇರಿ) ಜು.7 :- ತಾಲ್ಲೂಕಿನ ಭಾರತ ಸೇವಾದಳ ಶಾಖಾ ನಾಯಕ ನಾಯಕಿಯರಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳ ಮಿಲಾಪ್ ಶಿಬಿರ ನಡೆಯಿತು.
ತಾಲ್ಲೂಕು ಶಿಕ್ಷಣಾಧಿಕಾರಿ ಗಾಯತ್ರಿ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ ಪ್ರತಿ ಶಾಲೆಯಲ್ಲೂ ಸೇವಾದಳ ಶಾಖೆ ಸ್ಥಾಪಿಸಬೇಕು. ಮಕ್ಕಳಲ್ಲಿ ಶಿಸ್ತು, ದೇಶಭಕ್ತಿ, ಭಾವೈಕ್ಯತೆ, ನಾಯಕತ್ವ ಗುಣಗಳನ್ನು ಶಾಖಾ ನಾಯಕರು ಬೆಳೆಸಬೇಕು ಎಂದರು.
ಶಿಬಿರದ ಅಧ್ಯಕ್ಷತೆಯನ್ನು ಜಿಲ್ಲಾ ಭಾರತ ಸೇವಾದಳ ಘಟಕದ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯರಾದ ರೇವತಿ ರಮೇಶ್, ಕರುಂಬಯ್ಯ, ವಿಷಯ ಪರಿವೀಕ್ಷಕರಾದ ಶ್ರೀನಿವಾಸ, ತಾಲ್ಲೂಕು ಸಂಘಟಕರಾದ ತಮ್ಮಯ್ಯ, ಉಪ ಪ್ರಾಂಶುಪಾಲೆ ದೇವಮ್ಮ ಅವರು ಹಾಜರಿದ್ದರು. ತಾಲ್ಲೂಕಿನ ಎಲ್ಲಾ ಶಾಲೆಯ ಶಾಖಾ ನಾಯಕ, ನಾಯಕಿಯರು ಹಾಜರಿದ್ದರು.
(ಕೆಸಿಐ,ಎಸ್.ಎಚ್)