Uncategorized

ಅಧಿಕಾರಿಗಳಿಗೆ ಪಾಠ ಕಲಿಸಲು ಮುಂದಾದ ಜನತೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ  ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಮೀನು ಹಿಡಿದು ವ್ಯಾಪಾರ ದಂಧೆಗೆ ಇಳಿದಿದ್ದಾರೆ ಎಂದು ತಿಳಿದ ಕೂಡಲೇ ಸ್ಥಳೀಯ ಜನರು ಅಧಿಕಾರಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ಕಬಿನಿ ಜಲಾಶಯದಲ್ಲಿ ಮೀನು ಹಿಡಿಯಲು ಅಲ್ಲಿನ ಸ್ಥಳೀಯರು ತಾವೇ ಮುಂದಾಗಿ ಬಂದು ಲಗ್ಗೆ ಇಟ್ಟಿದ್ದು, ಮೀನು ಹಿಡಿಯುವಲ್ಲಿ ನಿರತರಾಗಿದ್ದಾರೆ. ಮೀನು ದಂಧೆ ನಡೆಯುತ್ತಿದೆ ಎಂದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರದ ವಿರುದ್ದ ಸಿಡಿದೆದ್ದಿದ್ದಾರೆ.
ಸ್ಥಳೀಯರೇ ಇದೀಗ ಮೀನು ಹಿಡಿಯಲು ತೊಡಗಿದ್ದು,  ಅಧಿಕಾರಿಗಳು ಕಂಗಾಲಾಗಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: