ಪ್ರಮುಖ ಸುದ್ದಿ

31ರಂದು ಚೇರಂಬಾಣೆಯಲ್ಲಿ ಸಾಹಿತ್ಯ ಸಮ್ಮೇಳನ

ರಾಜ್ಯ(ಮಡಿಕೇರಿ),ಜು.8:- ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ತಾ.31ರಂದು ಚೇರಂಬಾಣೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ ಬೇಂಗೂರು ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷ ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ತಾ. 31ರಂದು ಚೇರಂಬಾಣೆ ಕೊಡವ ಸಮಾಜದಲ್ಲಿ ಸಮ್ಮೇಳನ ಏರ್ಪಡಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಗ್ರಾ.ಪಂ ಸದಸ್ಯರುಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಲವು ಸಲಹೆ-ಸೂಚನೆಗಳನ್ನು ನೀಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರುಗಳು ಸಮ್ಮೇಳನ ನಡೆಸುವ ಬಗ್ಗೆ ರೂಪು-ರೇಷೆ ಬಗ್ಗೆ ಮಾಹಿತಿ ನೀಡಿದರು. ಸಮ್ಮೇಳನಕ್ಕೆ ಗ್ರಾಮಸ್ಥರ ಜನಪ್ರತಿನಿಧಿಗಳ, ಅಧಿಕಾರಿಗಳ, ಸಂಘ-ಸಂಸ್ಥೆಗಳ ಸಹಕಾರ ಕೋರಿದರು. ಸಮ್ಮೇಳನವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಕವಿ-ಕಲಾವಿದರಿಂದ ಆಹ್ವಾನ
ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧಕರನ್ನು ಸನ್ಮಾನಿಸುವಂತೆ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿ-ಕವಿಯತ್ರಿಯರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಬಯಸುವ ತಾಲೂಕಿನ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವವರು ತಾ.10ರೊಳಗಡೆ ಕುಡೆಕಲ್ ಸಂತೋಷ್ ಅವರನ್ನು (8762110948) ಸಂಪರ್ಕಿಸಬಹುದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಎ.ಟಿ. ಇಂದಿರಾ (8197445185), ಸಂಚಾಲಕಿ ತೇಲಪಂಡ ಲಕ್ಷ್ಮಿ (9663723549) ಅವರುಗಳನ್ನು ತಾ.20ರ ಒಳಗಡೆ ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ತೇಲಪಂಡ ಲಕ್ಷ್ಮಿ, ಸದಸ್ಯರುಗಳಾದ ಸುಮನ್, ಮಿತ್ರ ಚಂಗಪ್ಪ, ಸುಗುಣ, ಚರ್ಮಣ್ಣ, ಪೂರ್ಣಿಮಾ, ದಮಯಂತಿ, ಪ್ರಮುಖರಾದ ಮಧು ಬೋಪಣ್ಣ, ಎಂ.ಎನ್. ಮಾದಪ್ಪ, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಬಿ.ಜಿ. ಗಿರೀಶ್, ಅಟೋ ಚಾಲಕರ ಸಂಘದ ಚಂದ್ರಶೇಖರ್, ಯುವಕ ಸಂಘದ ಅರುಣ್, ಸ್ತ್ರೀಶಕ್ತಿ ಸಂಘದವರು ಇನ್ನಿತರರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: