ದೇಶಪ್ರಮುಖ ಸುದ್ದಿ

ಜವರಾಯನ ಅಟ್ಟಹಾಸ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗುರುಳಿದ ಬಸ್ ; 29ಮಂದಿ ಸಾವು

ದೇಶ(ನವದೆಹಲಿ)ಜು.8:- ಷಟ್ಪಥದ ಯುಮುನಾ ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್​​ ಸ್ಕಿಡ್​​ ಆದ ಪರಿಣಾಮ ರಸ್ತೆ ನಡುವಿನ ಸೇತುವೆಯಿಂದ ಬಹುದೊಡ್ಡ ಚರಂಡಿಗೆ ಬಿದ್ದು ಸುಮಾರು 29 ಮಂದಿ ಸಾವಿಗೀಡಾಗಿ, 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಆಗ್ರಾ ಸಮೀಪ ನಡೆದಿದೆ.

165ಕಿ.ಮೀ ಎಕ್ಸ್​ಪ್ರೆಸ್‌ ವೇ ಗ್ರೇಟರ್​ ನೋಯ್ಡಾದಿಂದ ಉತ್ತರ ಪ್ರದೇಶದ ಆಗ್ರಾವನ್ನು ಸಂಪರ್ಕಿಸುತ್ತದೆ. ಸುಮಾರು 50 ಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ದೆಹಲಿಗೆ ತೆರಳುತ್ತಿದ್ದ ಬಸ್​ ರಸ್ತೆಯ ನಡುವೆ ಸ್ಕಿಡ್​ ಆಗಿ ಸೇತುವೆಯಿಂದ ಸುಮಾರು 40 ಅಡಿ ಆಳವಿರುವ ಚರಂಡಿಗೆ ಬಿದ್ದಿದೆ ಎನ್ನಲಾಗಿದೆ.   ಮೂಲಗಳ ಪ್ರಕಾರ ಒನ್​ ಸ್ಲೀಪರ್​ ಕೋಚ್​ ಬಸ್​ ಆಗಿದ್ದು, ದುರಂತ ಸಂಭವಿಸುವ ಮುನ್ನ ಚಾಲಕ ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್​ ಚರಂಡಿಗೆ ಬಿದ್ದಿದೆ ಎಂದು ಹೇಳಲಾಗಿದೆ.  ಚರಂಡಿಗೆ ಬಿದ್ದಿರುವುದರಿಂದ ಬಸ್​ನ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬಸ್​​ನ ಮೇಲ್ಭಾಗದ ಕಬ್ಬಿಣದ ಬಿಡಿ ಭಾಗಗಳನ್ನು ಸರಿಸಿ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಚರಂಡಿಯಾಗಿರುವುದರಿಂದ ರಕ್ಷಣ ಕಾರ್ಯಾಚರಣೆಗೆ ತೊಡಕಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಗಾಯಗೊಂಡವರಿಗೆ ಹಾಗೂ ಸಾವಿಗೀಡಾದ ಕುಟುಂಬದವರಿಗೆ ಸಹಾಯ ಹಸ್ತ ನೀಡಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಯುಪಿ ಸಾರಿಗೆ ಇಲಾಖೆಯು ಮೃತರ ಕುಟುಂಬಗಳಿಗೆ ತಲಾ 5-5ಲಕ್ಷರೂ.ಗಳ ಪರಿಹಾರ ಘೋಷಿಸಿದೆ. (ಎಸ್.ಎಚ್)

Leave a Reply

comments

Related Articles

error: