ಮೈಸೂರು

ಕಾಂಕ್ರಿಟ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮೈಸೂರು,ಜು.8:- ವಾರ್ಡ್ ನಂಬರ್ 49ರ ಲಕ್ಷ್ಮೀಪುರಂನ ಹೊಸಕೇರಿಯ 2ಮತ್ತು 3ನೇ ಕ್ರಾಸ್ ಗಳಿಗೆ ಹೊಂದಿಕೊಂಡಿರುವ ಕನ್ಸರ್ ವೆನ್ಸಿ ಗಲ್ಲಿಗಳಿಗೆ 5ಲಕ್ಷರೂ.ಮೊತ್ತದ ಇಂಟರ್ ಲಾಕಿಂಗ್ ವ್ಯವಸ್ಥೆ ಹಾಗೂ ಹುಲ್ಲಿನ ಬೀದಿ ಭಾಗಗಳಲ್ಲಿ ಕನ್ಸರ್ ವೆನ್ಸಿ ಗಲ್ಲಿಗಳಿಗೆ 10ಲಕ್ಷರೂ.ವೆಚ್ಚದ ಕಾಂಕ್ರಿಟ್ ಮಾದರಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಉಮೇಶ್, ಶಾಸಕರ ಆಪ್ತಸಹಾಯಕ ಮುದ್ದುಕೃಷ್ಣ, ಲೋಕೇಶ್, ಪಾಪಚ್ಚಿ, ಬಾಲಾಜಿ, ಮಹಾವೀರ್ ಬಾಬು, ನಗರಪಾಲಿಕೆಯ ವಲಯ ಆಯುಕ್ತರಾದ ರಂಜಿತ್, ಅಭಿವೃದ್ಧಿ ಅಧಿಕಾರಿ ಭರತ್, ಶಂಕರ್, ಪದ್ಮಮ್ಮ, ಅಂಜಲಿ, ಚಂದ್ರು, ಸರಿತಾ, ಗೀತಾ, ರೇಣುಕಾ, ಸಾಗರ್ ಸಂತೋಷ್ ಮತ್ತಿತರರಿದ್ದರು. (ಎಸ್.ಎಚ್)

Leave a Reply

comments

Related Articles

error: