ಮೈಸೂರು

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ : ಬೆಂಗಳೂರಿಗೆ ದೌಡಾಯಿಸಿದ ಮೈಸೂರು ಭಾಗದ ಬಿಜೆಪಿ ಶಾಸಕರು

ಮೈಸೂರು,ಜು.8:- ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆಯಲ್ಲಿ ಮೈಸೂರು ಭಾಗದ ಬಿಜೆಪಿ ಶಾಸಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಚದುರಂಗಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಮೈತ್ರಿ ಪತನಕ್ಕೆ ಬಿಜೆಪಿ ನಾಯಕರು ಒಂದು ವರ್ಷದಿಂದ ಸ್ಕೆಚ್ ಹಾಕಿದ್ದರು ಎನ್ನಲಾಗುತ್ತಿದೆ.  ಮೈತ್ರಿ ನಾಯಕರೇ ಬಿಜೆಪಿಗೆ ಸರ್ಕಾರ ರಚಿಸಲು ದಾರಿ ಮಾಡಿಕೊಟ್ಟರಾ ಎಂಬ ಪ್ರಶ್ನೆ ಎದುರಾಗಿದ್ದು,  ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಸಭೆ ಕರೆದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಬಿಜೆಪಿ ನಾಯಕರ ಸೂಚನೆ ಮೇರೆಗೆ ಸಭೆ  ನಡೆಯುತ್ತಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಎಲ್ಲಾ ಶಾಸಕರನ್ನು ಆಹ್ವಾನಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಹ್ವಾನದ ಹಿನ್ನೆಲೆ ಬೆಂಗಳೂರಿನತ್ತ ಬಿಜೆಪಿ ಶಾಸಕರು ಮುಖ ಮಾಡಿದ್ದಾರೆ. ಶಾಸಕರುಗಳಾದ ಎಲ್ ನಾಗೇಂದ್ರ, ಎಸ್ ರಾಮದಾಸ್, ಹರ್ಷವರ್ಧನ್, ನಿರಂಜನ್ ಕುಮಾರ್ ಬೆಂಗಳೂರಿನತ್ತ ಪಯಣ ಬೆಳೆಸಿದ್ದು, ಬಿಜೆಪಿ  ನಾಯಕರ ಸಭೆ ಕುತೂಹಲ ಕೆರಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: