ಮೈಸೂರು

ಲಕ್ನೋ ಬಳಿ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ.ಮುದ್ದುಕೃಷ್ಣ ಮತ್ತವರ ಪತ್ನಿ ಸಾವು

ಮೈಸೂರು,ಜು.8:-  ನಿನ್ನೆ ಲಕ್ನೋ ಬಳಿ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ.ಮುದ್ದುಕೃಷ್ಣ ಹಾಗೂ ಅವರ ಪತ್ನಿ ಸಿಎಫ್ ಟಿಆರ್ ಐ ಉದ್ಯೋಗಿ ಬಿ.ಇಂದ್ರಾಣಿ ಮೃತಪಟ್ಟಿದ್ದಾರೆ.

ಲಕ್ನೋದಲ್ಲಿ  ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮುದ್ದುಕೃಷ್ಣ ಹಾಗೂ ಇಂದ್ರಾಣಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಇಂದ್ರಾಣಿ ಕೊನೆಯುಸಿರೆಳೆದಿದ್ದರು.

ಚೇತರಿಕೆ ಹಾದಿಯಲ್ಲಿದ್ದ ಮುದ್ದುಕೃಷ್ಣ ಅವರು ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಇಂದ್ರಾಣಿ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲೇ ದುರಂತ ಸಂಭವಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: