ಕ್ರೀಡೆಮನರಂಜನೆ

ಬೌಲರ್ ಜಸ್ಪ್ರೀತ್ ಬುಮ್ರಾ ಜೊತೆ ಡೇಟಿಂಗ್ ನಡೆಸುತ್ತಿಲ್ಲ : ಕೊನೆಗೂ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

ದೇಶ(ನವದೆಹಲಿ)ಜು.8:- ಚಲನಚಿತ್ರ ತಾರೆಯರು ಮತ್ತು ಕ್ರಿಕೆಟಿಗರ ನಡುವೆ ಸ್ನೇಹ, ಪ್ರೀತಿ ಮತ್ತು ವಿವಾಹಕ್ಕೆ  ಹಳೆಯದೇ ಇತಿಹಾಸವಿದೆ. ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್‌ರಿಂದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವರೆಗಿನ ಉದಾಹರಣೆಗಳಿವೆ.  ಇದು ಗ್ಲಾಮರ್ ಮತ್ತು ಕ್ರಿಕೆಟ್‌ ಜಗತ್ತಿನ ಚರ್ಚಿತ ವಿಷಯಗಳಾಗುತ್ತಿವೆ.  ಅದಕ್ಕಾಗಿಯೇ ಈ ಎರಡು ಕ್ಷೇತ್ರದ ಸ್ಟಾರ್ಸ್ಗಳು  ಪರಸ್ಪರ ಭೇಟಿಯಾದಾಗ ಅಥವಾ ಬೇರೆ ಯಾವುದೇ ರೀತಿಯಲ್ಲಿ ಸೇರಿದಾಗ,  ವದಂತಿಗಳು, ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ.

ಇಲ್ಲೂ ಹಾಗೆಯೇ ಆಗಿದೆ. ಟೀಮ್ ಇಂಡಿಯಾದ  ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ದಕ್ಷಿಣದ ನಟಿ ಅನುಪಮಾ ಪರಮೇಶ್ವರನ್  ಡೇಟಿಂಗ್ ನಡೆಸುತ್ತಿದ್ದಾರೆಂಬ  ವದಂತಿಗಳು ಹರಡಿವೆ.  ಇತ್ತೀಚೆಗೆ ಇಬ್ಬರು ತಾರೆಯರು ಪರಸ್ಪರ ಡೇಟಿಂಗ್ ಮಾಡುತ್ತಿವೆ ಎಂಬ ವರದಿಗಳು ಬಂದವು. ಆದರೆ, ನಟಿ ಅನುಪಮಾ ಅವರು ಬುಮ್ರಾ ಅವರ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಅಲ್ಲಗಳೆದಿದ್ದಾರೆ.

ವರದಿಯೊಂದರ ಪ್ರಕಾರ, ನಟಿ ಅನುಪಮಾ  ಬುಮ್ರಾ ಅವರನ್ನು  ಟ್ವೀಟರ್ ನಲ್ಲಿ ಫಾಲೋವ್ ಮಾಡಿದಾಗ    ಡೇಟಿಂಗ್ ವದಂತಿ ಹರಡಿದೆ ಎನ್ನಲಾಗಿದೆ. ಆದರೆ ಈ ವದಂತಿಯನ್ನು ಅನುಪಮಾ ತಳ್ಳಿ ಹಾಕಿದ್ದು,  ಬುಮ್ರಾ ಅವರು ನನ್ನ ಒಳ್ಳೆಯ ಸ್ನೇಹಿತ.  ನಾವು ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬುಮ್ರಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಡುತ್ತಿದ್ದಾರೆ. ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದ ನಂತರ ಟೀಮ್ ಇಂಡಿಯಾ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅದೇ ಸಮಯದಲ್ಲಿ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಫೈನಲ್ ಲಗ್ಗೆ ಇಡಲು  ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್  ನಡುವೆ ಪಂದ್ಯ ನಡೆಯಬಹುದು.  ವಿಶ್ವಕಪ್ ಫೈನಲ್ ಪಂದ್ಯ ಜುಲೈ 14 ರಂದು ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: