ಸುದ್ದಿ ಸಂಕ್ಷಿಪ್ತ

ನಂದೀಶ್ವರ ಅಷ್ಟಾಹ್ನಿಕ ಪರ್ವ ನಾಳೆ

ಮೈಸೂರು,ಜು.8 : ಶ್ರೀದಿಗಂಬರ ಜೈನ ಸಮಾಜ, ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತವಾಗಿ ಅಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವದವನ್ನು ಜು.9 ರಿಂದ 16ರವರೆಗೆ ಶ್ರೀಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಏರ್ಪಡಿಸಲಾಗಿದೆ.

ದಿ.9ರ ಸಂಜೆ 6.45ಕ್ಕೆ ಉದ್ಘಾಟನೆಯಲ್ಲಿ ದಿಗಂಬರ ಜೈನ ಸಮಾಜ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸುವರು, ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಅನಂತರಾಜ್ ಉದ್ಘಾಟಿಸುವರು. ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್ ಮುಖ್ಯ ಅತಿಥಿಯಾಗಿರುವರು. ಪ್ರತಿ ದಿನ ಸಂಜೆ 7.15 ರಿಂದ 8.15ರವರೆಗೆ ಪ್ರವಚನ ಇರಲಿದೆ. (ಕೆ.ಎಂ.ಆರ್)

Leave a Reply

comments

Related Articles

error: