ಸುದ್ದಿ ಸಂಕ್ಷಿಪ್ತ
ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪಣೆ : ಪ್ರತಿಭಾ ಪುರಸ್ಕಾರ
ಮೈಸೂರು,ಜು.8 : ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ 5ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರವನ್ನು ಜು.9 ಮತ್ತು 10ರಂದು ಏರ್ಪಡಿಸಲಾಗಿದೆ.
ಜು.9ರ ಬೆಳಗ್ಗೆ 9 ಗಂಟೆಗೆ ಕೆಹೆಚ್.ಬಿ. ಕಾಲೋನಿಯಲ್ಲಿ ಮುಖ್ಯರಸ್ತೆ ಗಣಪತಿ ದೇವಸ್ಥಾನದ ಹಿಂಭಾಗದ ಚಾಮುಂಡೇಶ್ವರಿ ಅಮ್ಮನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ನಡೆಸಲಾಗುವುದು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಸದಸ್ಯೆ ಸುನಂದ ಪಾಲನೇತ್ರ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಆರಕ್ಷಕ ನಿರೀಕ್ಷಕರಾದ ಜಿ.ಸಿ.ರಾಜು ಹಾಗೂ ಮಂಡಳಿಯ ಪದಾಧಿಕಾರಿಗಳು ಹಾಜರಿರಲಿದ್ದಾರೆ.
10ರಂದು ಮಧ್ಯಾಹ್ನ 12 ಗಂಟೆಯಿಂದ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. (ಕೆ.ಎಂ.ಆರ್)