ಮೈಸೂರು

ವಿದ್ಯುತ್ ತಂತಿಯನ್ನು  ಸ್ಪರ್ಶಿಸಿದ ಕಾರಣ  40 ವರ್ಷದ ಕಾಡಾನೆ ಸಾವು

ಮೈಸೂರು,ಜು.8:- ವಿದ್ಯುತ್ ತಂತಿಯನ್ನು  ಸ್ಪರ್ಶಿಸಿದ ಕಾರಣ  40 ವರ್ಷದ ಕಾಡಾನೆ ಸಾವನ್ನಪ್ಪಿದ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೋಕಿನ ಆನೆಮಾಳ ಮಚ್ಚೂರು ಹೊರವಲಯದಲ್ಲಿ ನಡೆದಿದೆ.

ಆನೆ ಆಹಾರ ಅರಸಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಅರಣ್ಯದಿಂದ ಜಮೀನಿಗೆ ಬಂದಿತ್ತು. ಬಾಳೆ ಬೆಳೆ ರಕ್ಷಣೆಗಾಗಿ ಜಮೀನಿಗೆ‌ ಹರಿಸಿದ್ದ ಅಕ್ರಮ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ಮಪ್ಪಿದೆ. ಸುಬ್ರಮಣ್ಯ ಎಂಬವರಿಗೆ ಸೇರಿದ ಜಮೀನು ಇದಾಗಿದೆ. ಸ್ಥಳಕ್ಕೆ ಎ.ಸಿ.ಎಫ್ ಕೇಶವೇಗೌಡ, ಆರ್ ಎಫ್ ಒ ಸುಬ್ರಮಣ್ಯಸ್ವಾಮಿ ಭೇಟಿ ನೀಡಿದ್ದಾರೆ.

ಪಶು ವೈದ್ಯ ಡಾ.ಮುಜೀಬ್ ಮೃತ ಆನೆಯ ದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: