ಪ್ರಮುಖ ಸುದ್ದಿಮೈಸೂರು

ಬಿಎಸ್ ವೈ ಮಾಡಿರುವ ಆರೋಪಗಳನ್ನು ದಾಖಲೆ ಸಮೇತ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿಎಂ ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ದಾಖಲೆ ಸಮೇತ ಸಾಬೀತು ಮಾಡಿದರೆ ಆ ಕ್ಷಣವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡುವಲ್ಲಿ ವಿಫಲವಾದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ಈ ಹಿಂದೆಯೂ ಮೂರು ಜನ ಮಂತ್ರಿಗಳು ರಾಜೀನಾಮೆ ನೀಡುತ್ತಾರೆ ಅಂತ ಹೇಳಿದ್ದರು.  ಆದರೆ ಯಾರೂ ಸಹ ರಾಜೀನಾಮೆ ನೀಡಲಿಲ್ಲ. ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಐಟಿ ದಾಳಿಯಲ್ಲಿ ಸಿಕ್ಕಿದ ಶಾಸಕರೆಲ್ಲರನ್ನು ನನ್ನ ಆಪ್ತರು ಎನ್ನುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕದ ಆಸ್ತಿ ವಿವರ ಮಾಹಿತಿಯನ್ನು ಕೊಟ್ಟಿಲ್ಲ. ಆದರೆ ಇವರಿಗೆ ಇಷ್ಟೇ ಆಸ್ತಿ ಸಿಕ್ಕಿದೆ ಅಂತ ಮಾಹಿತಿ ಹೇಗೆ ತಿಳಿಯಿತು. ಅಂದರೆ ಕೇಂದ್ರ ಸರ್ಕಾರ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರು ಹಾಗೂ ನಾಯಕರ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದೇಯಾ. ಐಟಿ ಇಲಾಖೆ ಮಾಹಿತಿ ಇವರಿಗೆ ಹೇಗೆ ತಿಳಿಯುತ್ತೆ ಅನ್ನೋದನ್ನ ಮೊದಲು ತಿಳಿಸಲಿ ಎಂದು ಗುಡುಗಿದರು.  ಚುನಾವಣೆ ವೇಳೆ ನನ್ನ ಮೇಲೆ ಚಾರ್ಜ್ ಶೀಟ್ ಹಾಕಿಸುತ್ತೇನೆ ಎಂದಿದ್ದಾರೆ. ಚುನಾವಣೆ ಬರಲಿ ನಾನು ಅವರ ಹಳೆ ಕಥೆಗಳನ್ನು ತೆಗೆದು ಇಡುತ್ತೇನೆ. ಅವರ ಆಸ್ತಿ ವಿವರವನ್ನು ಬಹಿರಂಗ ಪಡಿಸುತ್ತೇನೆ. ಅವರು ಶಿವಮೊಗ್ಗಕ್ಕೆ ಹೋದಾಗ ಆಸ್ತಿ ಎಷ್ಟಿತ್ತು. ಈಗ ಅವರ ಆಸ್ತಿ ಎಷ್ಟಿದೆ. ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲ ಮಾಡಿದರು ಅಂತ ನಾನು ಬಹಿರಂಗ ಪಡಿಸುತ್ತೇನೆ ಎಂದರು.
ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ಒಂದು ಕ್ಷಣ ನಾನು ರಾಜಕೀಯದಲ್ಲಿ ಇರೋಲ್ಲ.
ಆದರೆ ಆರೋಪ ಸಾಬೀತು ಮಾಡದೆ ಇದ್ದಲ್ಲಿ ಇವರು ರಾಜ್ಯದ ಜನರ ಕ್ಷಮೆಯಾಚಿಸುತ್ತಾರಾ.
ತಮ್ಮ ಪದವಿಗಳಿಗೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದು ಪ್ರಶ್ನಿಸಿದರು. ಎಂ.ಎಲ್.ಸಿ. ಗೋವಿಂದರಾಜು ಡೈರಿಯ ವಿಚಾರ ತನಗೆ ಗೊತ್ತಿಲ್ಲ.
ಪ್ರಧಾನಿ ಮೋದಿ ಸಹರಾ ಕಂಪನಿಯಿಂದ ಲಂಚ ಪಡೆದಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ.ಹೀಗಾಗಿ ಪ್ರಧಾನಿ ಮೋದಿ ರಾಜೀನಾಮೆಗೆ ಯಡಿಯೂರಪ್ಪ ಮೊದಲು ಒತ್ತಾಯ ಮಾಡಲಿ ಎಂದರು.
ರಾಜ್ಯದಲ್ಲಿ ಕಂಬಳ ಕ್ರೀಡೆ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು
ಕಂಬಳವನ್ನು ಕ್ರೀಡೆಯನ್ನಾಗಿ ಉಳಿಸಿಕೊಳ್ಳಲು ಕಾನೂನು ಮಂಡಿಸುತ್ತೇವೆ. ಈ ನಿಟ್ಟಿನಲ್ಲಿ ನಾಳಿನ ವಿಧಾನಮಂಡಲ ಅಧಿವೇಶನದಲ್ಲಿ ಹೊಸ ಕಾಯ್ದೆಯನ್ನು ಮಂಡಿಸಲಾಗುತ್ತದೆ  ಎಂದು ತಿಳಿಸಿದರು.

Leave a Reply

comments

Related Articles

error: