ಪ್ರಮುಖ ಸುದ್ದಿ

ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳು ಪ್ರತ್ಯಕ್ಷ

ರಾಜ್ಯ(ಮಡಿಕೇರಿ) ಜು.8 :- ವನ್ಯಜೀವಿಗಳಿಗೂ, ಕೊಡಗಿನ ಗ್ರಾಮೀಣ ಭಾಗಕ್ಕೂ ಒಂದು ರೀತಿಯ ನಂಟಿದೆ. ಕಾಡಾನೆಗಳ ಹಿಂಡಿಗೆ ಮಾತ್ರ ಈ ಭೂಮಿ ಪ್ರಿಯವಲ್ಲ, ಹುಲಿ, ಚಿರತೆಗಳಿಗೂ ವಿಹರಿಸಲು ಜಿಲ್ಲೆಯ ಗ್ರಾಮಗಳು ಬೇಕು. ಇದೀಗ ಕಾಡುಕೋಣಗಳ ಸರದಿ,
ಸಿದ್ದಾಪುರ ಸಮೀಪ ಕರಡಿಗೋಡು ಗ್ರಾಮದಲ್ಲಿ ಇಂದು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಕುತೂಹಲದೊಂದಿಗೆ ಆತಂಕವು ಮೂಡಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: