ಮೈಸೂರು

ಸಾರ್ವಜನಿಕರೆದುರೇ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಯುವಕನೋರ್ವ ಸಾರ್ವಜನಿಕರ ಎದುರೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಬಳಿ ರೈಲು ಬರುತ್ತಿದ್ದರಿಂದ ರೈಲ್ವೆ ಗೇಟ್ ನ್ನು ಹಾಕಲಾಗಿತ್ತು. ಹಳಿಗಳ ಮೇಲೆ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಶತಾಬ್ದಿ ಎಕ್ಸ್‍ಪ್ರೆಸ್ ರೈಲು ಚಲುಸುತ್ತಲಿತ್ತು. ಈ ಸಂದರ್ಭ ರೈಲ್ವೆ ಗೇಟ್ ಬಳಿಯೇ ನಿಂತಿದ್ದ ಯುವಕನೋರ್ವ  ಏಕಾ ಏಕಿ ರೈಲು ಹಳಿಗಳ ಮೇಲೆ ನಿಂತುಕೊಂಡ. ಇದನ್ನು ನೋಡಿದ ಸಾರ್ವಜನಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಇದಾವುದಕ್ಕೂ ಕಿವಿಗೊಡದ ಯುವಕ ಸ್ಥಿರವಾಗಿ ರೈಲು ಹಳಿಗಳ ಮೇಲೆ ನಿಂತ ಪರಿಣಾಮ, ವೇಗವಾಗಿ ಬಂದ ರೈಲು, ಯುವಕನ ದೇಹವನ್ನುಎರಡು ಛಿದ್ರಗೊಳಿಸಿ ಮುಂದೆ ಸಾಗಿದೆ. ಕಣ್ಣೆದುರೇ ಯುವಕ ಆತ್ಮಹತ್ಯೆ ಮಾಡಿಕೊಂಡ ದೃಶ್ಯವನ್ನು ನೋಡಿ ಸಾರ್ವಜನಿಕರು ಕಂಗಾಲಾದರು.

ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

comments

Related Articles

error: