ಮೈಸೂರು

‘ರಾಷ್ಟ್ರೀಯ ಶಿಕ್ಷಣದ ನೀತಿ 2019 ಮತ್ತು ಉನ್ನತ ಶಿಕ್ಷಣದ ಪರಿಕಲ್ಪನೆ ವಿಚಾರ ಸಂಕಿರಣ

ಮೈಸೂರು,ಜು.9:- ಮೈಸೂರು ವಿಶ್ವವಿದ್ಯಾನಿಲಯ  ಮತ್ತು ಕರ್ನಾಟಕದ ಮಾಜಿ ಉಪಕುಲಪತಿಗಳ ವೇದಿಕೆ ವತಿಯಿಂದ ‘ರಾಷ್ಟ್ರೀಯ ಶಿಕ್ಷಣದ ನೀತಿ 2019 ಮತ್ತು ಉನ್ನತ ಶಿಕ್ಷಣದ ಪರಿಕಲ್ಪನೆಗಳು’ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನಿಂದು ಏರ್ಪಡಿಸಲಾಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ಆಯೋಗದ ಮುಖ್ಯಸ್ಥ  ಕೆ  ಕಸ್ತೂರಿ ರಂಗನ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಲಿಂಗರಾಜ್ ಗಾಂಧಿ ಅವರು ‘ರಾಷ್ಟ್ರೀಯ ಶಿಕ್ಷಣದ ನೀತಿ 2019 ಮತ್ತು ಉನ್ನತ ಶಿಕ್ಷಣದ ಪರಿಕಲ್ಪನೆಗಳು’ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ  ಪ್ರೊ. ಜಿ. ಹೇಮಂತ್ ಕುಮಾರ್ ,ಪ್ರೊ. ಎಸ್ ಎನ್ ಹೆಗಡೆ ,  ನಾಗಣ್ಣ ಸೇರಿದಂತೆ  ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: