ಮೈಸೂರು

ದೇಹದ ಸಮತೋಲನಕ್ಕೆ ಕಿವಿ ಅವಶ್ಯ : ಪಿ.ಪ್ರಶಾಂತ್ ಪ್ರಭು

ದೇಹದ ಸಮತೋಲನ ಕಾಯ್ದುಕೊಳ್ಳಲು ಕಿವಿ ಅತ್ಯವಶ್ಯವಾಗಿದ್ದು ಸಂವಹನ ಹಾಗೂ ಭಾವನೆಗಳ ವಿನಿಮಯಕ್ಕೆ ಬೇಕೆ ಬೇಕಾಗಿದೆ ಎಂದು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಪಿ.ಪ್ರಶಾಂತ್ ಪ್ರಭು ಅಭಿಪ್ರಾಯಪಟ್ಟರು.

ಅವರು, ಮೈಸೂರು ಸೈನ್ಸ್ ಫೌಂಡೇಷನ್‍ ಹಮ್ಮಿಕೊಂಡಿದ್ದ ‘ಶ್ರವಣದೋಷ-ಕಾರಣಗಳು ಹಾಗೂ ತಡೆಗಟ್ಟುವಿಕೆ’ ವಿಷಯವಾಗಿ ಉಪನ್ಯಾಸ ನೀಡುತ್ತಾ, ಪಂಚೇಂದ್ರಿಯಲ್ಲಿ ಒಂದಾದ ಕಿವಿಯು ಅತಿ ಸೂಕ್ಷ್ಮ ರಚನೆಯಾಗಿದ್ದು ಶಬ್ಧ ತರಂಗಗಳನ್ನು ವಿದ್ಯುತ್ ತರಂಗಗಳಾಗಿ ಮಾರ್ಪಡಿಸಿ ನರಗಳ ಮೂಲಕ ಮೆದುಳು ತಲುಪಿಸುವ ವಿಸ್ಮಯದ ಮೂಲ ಎಂದರು. ಮೊಬೈಲ್‍ ಇಯರ್‍ ಫೋನ್‍ನಲ್ಲಿ ಹೆಚ್ಚಿನ ಶಬ್ಧದಿಂದ ಕೇಳುವುರಿಂದ ಕಿವುಡುತನವು ಹದಿಹರೆಯದಲ್ಲಿ ಹೆಚ್ಚುತ್ತಿದೆ ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಗರ್ಭಾವಸ್ಥೆಯಲ್ಲಿಯೂ ಶ್ರವಣ ದೋಷವನ್ನು ಪತ್ತೆ ಹಚ್ಚಿ ಚಿಕಿತ್ಸೆ ಸಾಧ್ಯವೆಂದ ಅವರು ಹೆಚ್ಚಿನ ವ್ಯಾಲ್ಯೂಮ್‍ನಿಂದ ಇಯರ್‍ ಫೋನ್‍ನಲ್ಲಿ ಮ್ಯೂಸಿಕ್ ಕೇಳಬೇಡಿ, ಸ್ವಯಂ ಚಿಕಿತ್ಸೆ  ಬೇಡ ಹಾಗೂ ಕಿವಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಕರೆ ನೀಡಿದರು.

ಎಂ.ಎಸ್.ಎಫ್ ಸಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಜಿ.ಬಿ.ಸಂತೋಷ್‍ ಕುಮಾರ್, ಡಿ.ಎಸ್.ವೈಜಯಂತಿ, ಜಿ.ಕೆ.ಕಾಂತರಾಜು, ಸಿ.ಪುರಂದರ್ ಮತ್ತು ಶ್ರೀಕಂಠಮೂರ್ತಿ ಕಾರ್ಯಕ್ರಮದಲ್ಲಿದ್ದರು.

Leave a Reply

comments

Related Articles

error: