ಮೈಸೂರು

ರಸ್ತೆ ಅಪಘಾತದಲ್ಲಿ ಯೋಧ ಸಾವು

ರಸ್ತೆ ಅಪಘಾತದಲ್ಲಿ ಯೋಧರೋರ್ವರು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತರನ್ನು ಬಿಎಂಶ್ರೀ ನಗರದ ನಿವಾಸಿ ಮಹದೇವು ಎಂಬವರು ಪುತ್ರ ಮಹೇಶ್(26) ಎಂದು ಗುರುತಿಸಲಾಗಿದೆ. ರಾತ್ರಿ ಸ್ನೇಹಿತರನ್ನು ನೋಡಲು ಬೈಕ್ ನಲ್ಲಿ ಬಂದಿದ್ದು, ಆರ್.ಬಿ.ಐ.ಸಮೀಪದ ರಿಂಗ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿತ್ತು.  ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಮಹೇಶ್ ರಾಜಸ್ಥಾನದಲ್ಲಿ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳು ರಜೆ ಹಾಕಿ ಜನವರಿ 15ರಂದು ಮೈಸೂರಿಗೆ ಬಂದಿದ್ದರು. ಫೆ.15ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಕೆಲ ತಿಂಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಇವರು, ಮೊನ್ನೆಯಷ್ಟೆ ವಿವಾಹ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.

Leave a Reply

comments

Related Articles

error: