ಮೈಸೂರು

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ತಪಾಸಣೆಗಳು ನಾಳೆ

ಮೈಸೂರು,ಜು.10 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿ.11ರಂದು ಹಲವಾರು ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ.

ಹರ್ನಿಯಾ ಸಂಜೆ ಕ್ಲಿನಿಕ್ :  ಹರ್ನಿಯ ಸಂಜೆ ಕ್ಲಿನಿಕ್ ಅನ್ನು ಸಂಜೆ 4 ರಿಂದ 6ರವರೆಗೆ ಏರ್ಪಡಿಸಲಾಗಿದೆ. ಇದರೊಂದಿಗೆ ರೋಗ ನಿರ್ಣಾಯಕ ತಪಾಸಣೆಗಳು, ಶಸ್ತ್ರಚಿಕಿತ್ಸೆ ಅವಾಯಕತೆ ಇರುವವರಿಗೆ ವಿಶೇಷ ರಿಯಾಯಿತಿ ಲಭ್ಯವಿರಲಿದೆ.

ಜಠರ ಕರುಳಿನ ಕ್ಯಾನ್ಸರ್ ಕ್ಲಿನಿಕ್ : ಅಂದು ಬೆಳಗ್ಗೆ 10 ರಿಂದ 2ರವರೆಗೆ ಜಠರ ಕರುಳಿನ ಕ್ಯಾನ್ಸರ್ ಕ್ಲಿನಿಕ್ ಅನ್ನು ಆಯೋಜಿಸಲಾಗಿದೆ.

ಲಕ್ಷಣಗಳು : ವಾಂತಿ, ರಕ್ತವಾಂತಿ, ತೂಕದಲ್ಲಿ ಇಳಿಕೆ, ಹೊಟ್ಟೆನೋವು, ಹೊಟ್ಟೆಯಲ್ಲಿ ಗಂಟು, ಮಲದಲ್ಲಿ ರಕ್ತ ಹೋಗುವುದು, ದೀರ್ಘಕಾಲದ ಜಾಂಡೀಸ್, ನುಂಗಲು ಕಷ್ಟ ಮುಂತಾದವುಗಳು.

ಅಧಿಕ ರಕ್ತದೊತ್ತಡ : ಅಂದು ಬೆಳಗ್ಗೆ 10 ರಿಂದ 2ರವರೆಗೆ ಅಧಿಕ ರಕ್ತದೊತ್ತಡ ಶಿಬಿರ ಏರ್ಪಡಿಸಲಾಗಿದೆ.

ಕರುಳಿನ ಉರಿಯೂತ ಕ್ಲಿನಿಕ್ : ಬೆಳಗ್ಗೆ 10 ರಿಂದ 2ರವರೆಗೆ ಕರುಳಿನ ಉರಿಯೂತ ತಪಾಸಣೆ ಶಿಬಿರ ನಡೆಸಲಾಗುತ್ತಿದೆ.

ವಿವರಗಳಿಗೆ ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದೆಂದು ಮಾರುಕಟ್ಟೆಯ ಮುಖ್ಯಸ್ಥ ಕೆ.ವಿ.ಕಾಮತ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: