ಕ್ರೀಡೆಪ್ರಮುಖ ಸುದ್ದಿ

ವಿಶ್ವಕಪ್ ನಿಂದ ಹೊರಬಿದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸಂದೇಶ

ದೇಶ(ನವದೆಹಲಿ)ಜು.11:-  ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ  ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್  ವಿರುದ್ಧ 18 ರನ್‌ಗಳ ಸೋಲನುಭವಿಸಿದ ಭಾರತ  ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಆಟಗಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ.

ಟೀಂ ಇಂಡಿಯಾ ಗೆಲುವಿನ ಓಟದಲ್ಲಿತ್ತು. ಇಡೀ ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧ ಒಂದು ಪಂದ್ಯವನ್ನು ಸೋತಿದ್ದು ಬಿಟ್ಟರೆ ಮತ್ತೆಲ್ಲೂ ತನ್ನ ಗೆಲುವನ್ನು ಬಿಟ್ಟುಕೊಟ್ಟಿರಲಿಲ್ಲ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿಸಿದ ಭಾರತ ತಂಡ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋಲನುಭವಿಸಿತ್ತು.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ‘ಇದೊಂದು ನಿರಾಶಾದಾಯಕ ಫಲಿತಾಂಶ. ಆದರೂ ಟೀಂ ಇಂಡಿಯಾ ಕೊನೆಯವರೆಗೂ ಉತ್ತಮ ಹೋರಾಟ ಮಾಡಿದೆ. ಇಡೀ ವಿಶ್ವಕಪ್​ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್​ ತಂಡದ ಬೌಲಿಂಗ್​, ಬ್ಯಾಟಿಂಗ್​, ಫೀಲ್ಡಿಂಗ್​ ಎಲ್ಲವೂ ಅತ್ಯುತ್ತಮವಾಗಿತ್ತು. ನಮಗೆಲ್ಲ ತುಂಬ ಹೆಮ್ಮೆಯಿದೆ. ಸೋಲು-ಗೆಲುವು ಜೀವನದ ಒಂದು ಭಾಗ. ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: