
ಪ್ರಮುಖ ಸುದ್ದಿ
ರಂಗರೆಡ್ಡಿ ಜಿಲ್ಲೆಯ ತಹಶೀಲ್ದಾರ್ ನಿವಾಸದ ಮೇಲೆ ಎಸಿಬಿ ದಾಳಿ : ನಗದು-ಚಿನ್ನಾಭರಣ ವಶ
ದೇಶ(ತೆಲಂಗಾಣ)ಜು.11:- ಇಲ್ಲಿನ ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಓರ್ವರ ನಿವಾಸದ ಮೇಲೆ ನಿನ್ನೆ ತಡರಾತ್ರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಣ ವಶಪಡಿಸಿಕೊಂಡಿದೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ನಡೆಸಲಾದ ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ತಡರಾತ್ರಿ ನಡೆಸಲಾದ ದಾಳಿ ಸಮಯದಲ್ಲಿ ಒಟ್ಟು 93.5 ಲಕ್ಷ ರೂ. ನಗದು ಮತ್ತು ಚಿನ್ನದ ಆಭರಣಗಳು ದೊರೆತಿವೆ ಎನ್ನಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. (ಎಸ್.ಎಚ್)