ಪ್ರಮುಖ ಸುದ್ದಿ

ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ? : ಸ್ಪೀಕರ್ ರಮೇಶ್ ಕುಮಾರ್ ಕಿಡಿ

ರಾಜ್ಯ(ಬೆಂಗಳೂರು)ಜು.11:- ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ ?ಈ ಹಿಂದೆ ತಿಂಗಳು ಕಳೆದಿರುವ ಉದಹಾರಣೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ ಅವರಿಗೆ ಒಂದು ವಾರದಲ್ಲಿ ಆಗಬೇಕಾಗಿರುವ ಕೆಲಸವಾದರೂ ಏನು ? ಜನಸಾಮಾನ್ಯರು ಅವರ ಪಾಡಿಗೆ ಅವರಿದ್ದಾರೆ ಅಲ್ಲವೇ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಗೆಯೇ  ನಾನು ನನ್ನ ಕುಟುಂಬದ ಜತೆ ಇದ್ದೇನೆ. ವಿಧಾನಸೌಧದಲ್ಲಿ ಬಂದು ಭೇಟಿ ಮಾಡುವವರು ಭೇಟಿ ಮಾಡಬಹುದು. ಅಧಿವೇಶನವನ್ನು ಮುಂದೂಡಲು ಸಾಧ್ಯವಿಲ್ಲ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: