ಮೈಸೂರು

ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ : ಚಿಕಿತ್ಸೆ ಫಲಿಸದೇ ಸಾವು; ಪೋಷಕರಿಂದ ಕೊಲೆ ಆರೋಪ

ಮೈಸೂರು,ಜು.11:- ವಿವಾಹಿತೆಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರು ತಾಲೂಕು ಕೆ.ಎನ್.ಹುಂಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೆ.ಎನ್.ಹುಂಡಿ ನಿವಾಸಿ ಹೇಮಾವತಿ(22) ಎಂದು ಗುರುತಿಸಲಾಗಿದ್ದು, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ  ಜುಲೈ8 ಪತ್ತೆಯಾಗಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಆಕೆಯ ಪತಿಯ ಮನೆಯವರು ಇಟ್ಟಿಗೆಗೂಡು ನಿರ್ಮಾಣಕ್ಕಾಗಿ ಹಣಕ್ಕೆ ಒತ್ತಾಯಿಸಿದ್ದರು. ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆಂದು ಹೇಮಾವತಿ ಪೋಷಕರು ಆರೋಪ ಹೊರೆಸಿದ್ದಾರೆ. ಇಟ್ಟಿಗೆಗೂಡು ನಿರ್ಮಾಣಕ್ಕಾಗಿ ಒಂದು ಲಕ್ಷ ಕ್ಯಾಶ್ ಹಾಗೂ ಮೈಸೂರಿನ ವಿಜಯನಗರದಲ್ಲಿ ಇರುವ  ಒಂದು ಸೈಟ್ ನೀಡುವಂತೆ ಒತ್ತಾಯಿಸಿದ್ದರೆಂಬ ಆರೋಪ ಕೇಳಿ ಬಂದಿದೆ.

ಗ್ರಾಮಾಂತರ ಪೊಲೀಸ್ ರು ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: