ಪ್ರಮುಖ ಸುದ್ದಿಮೈಸೂರು

ಮೈಸೂರಿನ ಸುಪ್ರೀಂ ಫಾರ್ಮಾಸ್ಯೂಟಿಕಲ್ಸ್ ಕಂಪನಿಗೆ ದೇಶದ ಅತ್ಯುತ್ತಮ ಎಸ್.ಎಂ.ಇ 100 ಪ್ರಶಸ್ತಿ

ಮೈಸೂರು. ಜು.11: ನಂಜನಗೂಡು ರಸ್ತೆ ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರೀಂ ಫಾರ್ಮಾಸ್ಯೂಟಿಕಲ್ಸ್ ಮೈಸೂರು ಪ್ರೈ.ಲಿ ಕಂಪನಿಗೆ ಪ್ರಸಕ್ತ ಸಾಲಿನ ದೇಶದ ಅತ್ಯುತ್ತಮ ಎಸ್ ಎಂ ಇ 100 ಪ್ರಶಸ್ತಿ ಗೆ ಪಾತ್ರವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಎಸ್.ಎನ್.ರಾವ್ ತಿಳಿಸಿದರು.

ನವದೆಹಲಿಯ ನೆಹರು ಪ್ಲೇಸ್ ನ ಇರೋಸ್ ಹೋಟೆಲ್‌ ನಲ್ಲಿ ಕಳೆದ ಜು.27ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯದಿಂದ ಕೊಡ ಮಾಡಲ್ಪಡುವ ಪ್ರಶಸ್ತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನೀಡಿ ಗೌರವಿಸಿದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿಗಾಗಿ ರಾಜ್ಯದಿಂದ ಸುಮಾರು  100 ಕಂಪನಿಗಳು ಸೇರಿದಂತೆ, ದೇಶದ ಒಟ್ಟು ಆರು ಕೋಟಿ ಉದ್ಯಮಗಳು ಹೆಸರು ನೊಂದಾಯಿಸಿಕೊಂಡಿದ್ದವು,   ರಾಜ್ಯಕ್ಕೆ ಒಟ್ಟು 14  ಪ್ರಶಸ್ತಿಗಳು ಲಭಿಸಿದ್ದು ಅದರಲ್ಲಿ ತಮ್ಮ ಕಂಪನಿಯು ಒಂದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ತಮ್ಮ ಸಂಸ್ಥೆ ಕಳೆದ ಹದಿಮೂರು ವರ್ಷಗಳ ಹಿಂದೆ ಕೇವಲ 30 ಸಾವಿರ ಬಂಡವಾಳದೊಂದಿಗೆ ಆರಂಭವಾಗಿ ಇಂದು   55 ಕೋಟಿ ವಹಿವಾಟು ನಡೆಸುತ್ತಿದೆ. 150 ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

ಜೌಷದೋದ್ಯಮದಲ್ಲಿ ಮುಂಚೂಣಿಯಲ್ಲಿರುವ ತಮ್ಮ ಕಂಪನಿಯಲ್ಲಿ ಜೀವಸತ್ವಗಳು. ಖನಿಜಗಳು , ಗಿಡಮೂಲಿಕೆಗಳ ಸಾರಗಳು ಮತ್ತು ಸೂತ್ರೀಕರಣ ನಡೆಸಲಾಗುವುದು. ದೇಶದಲ್ಲಿ 400 ಸಂಸ್ಥೆಗಳು ಗ್ರಾಹಕರಾಗಿದ್ದು. ತಮ್ಮ ಉತ್ಪನ್ನಗಳಿಗೆ ಅಮೇರಿಕದಲ್ಲಿ ಹೆಚ್ಚು ಬೇಡಿಕೆಯಿದ್ದು ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು.

ಅಂದು ನಡೆದ ಸಮಾರಂಭದಲ್ಲಿ ಎಂ.ಎಸ್ ಪ್ರತಾಪ್ ಚಂದ್ರ ಸಾರಂಗಿ. ಎಸ್ ಎಂ ಇ ಜಂಟಿ ಕಾರ್ಯದರ್ಶಿ ಅಲ್ಕಾ ಅರೋರಾ, ಅಕ್ಸಿಸ್ ಬ್ಯಾಂಕ್ ಸಿಇಒ ಅಮಿತಾಬ್ ಚೌಧರಿ, ಎಂ.ಎಸ್.ಎಂ.ಇ ಕಾರ್ಯದರ್ಶಿ ಡಾ.ಅರುಣ್ ಕುಮಾರ್ ಹಾಗೂ ಇತರರು ಹಾಜರಿದ್ದರು ಎಂದು ತಿಳಿಸಿದರು.

ಸಂಸ್ಥೆ ನಿರ್ದೇಶಕರಾದ ಆದಿತ್ಯ, ಅಮಿತ್ ಹಾಗೂ  ಆಡಳಿತಾಧಿಕಾರಿ ದಿನೇಶ್ ಕುಮಾರ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: