ಮೈಸೂರು

ವಲಯ ಕಛೇರಿ 7ರಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಹಾನಗರ ಪಾಲಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್

ಮೈಸೂರು,ಜು.11:- ಇಂದು ವಲಯ ಕಛೇರಿ 7ರಲ್ಲಿ ಮಹಾನಗರ ಪಾಲಿಕೆಯ ಮೇಯರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನಗರ ವಲಯ ಕಛೇರಿ 7 ರಲ್ಲಿ ಸಭೆ ನಡೆಸಿದ ಮೇಯರ್ ಪುಷ್ಪಲತಾ  ಜಗನ್ನಾಥ್ ಮೊದಲಿಗೆ ನೀರಿನ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ಮಾತನಾಡಿ ಈ ವಲಯಕ್ಕೆ ಸಂಬಂಧಿಸಿದಂತೆ 7ಬೋರ್ ವೆಲ್ ಗಳು ಇದ್ದು ಅದರಲ್ಲಿ 5 ಮಾತ್ರ ಉಪಯೋಗಿಸುವ ಹಂತದಲ್ಲಿದೆ. 2 ಬೋರ್ ವೆಲ್ ನೀರಿಲ್ಲದೆ ಬರಿದಾಗಿದೆ ಎಂದು ಮೇಯರ್ ಗೆ ಮಾಹಿತಿ ನೀಡಿದರು.

ನಗರಪಾಲಿಕೆಯ ಹೆಚ್ಚುವರಿ ಆಯುಕ್ತರು ,ಉಪಮಹಾಪೌರರು,ನಗರಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: