ಕ್ರೀಡೆ

ದ್ವಿತೀಯ ಸೆಮಿಫೈನಲ್: ಟಾಸ್ ಗೆದ್ದ ಆಸೀಸ್ ನಿಂದ ಬ್ಯಾಟಿಂಗ್ ಆಯ್ಕೆ; ಆರಂಭಿಕ ಆಘಾತ

ಬರ್ಮಿಂಗ್ಹ್ಯಾಮ್,ಜು.11-ವಿಶ್ವಕಪ್ ಟೂರ್ನಿಯಲ್ಲಿ ನಡೆಯುತ್ತಿರುವ ದ್ವಿತೀಯ ಸೆಮಿಫೈನಲ್ ನಲ್ಲಿ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳು ಸೆಣಸುತ್ತಿವೆ.

ಬರ್ಮಿಂಗ್ಹ್ಯಾಮ್ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ

ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಆಸೀಸ್ ಗೆ ಆರಂಭಿಕ ಆಘಾತ ಎದುರಾಗಿದೆ. ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ರೂಪದಲ್ಲಿ ಆರಂಭಿಕ ಆಘಾತ ಎದುರಾಗಿದೆ. 1.1 ಓವರ್ ನಲ್ಲಿ 4 ರನ್ ಇರುವಾಗ ಮೊದಲ ವಿಕೆಟ್ ಪತನವಾದರೆ, 2.4 ಓವರ್ ನಲ್ಲಿ 10 ರನ್ ಇರುವಾಗ ಎರಡನೇ ವಿಕೆಟ್ ಪತನವಾಯಿತು.

ಆ್ಯರೋನ್ ಫಿಂಚ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ ಡೇವಿಡ್ ವಾರ್ನರ್ 9 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ಆಸೀಸ್ ನ ಸ್ಕೋರ್ 6 ಓವರ್ ನಲ್ಲಿ 14/2 ಆಗಿದೆ. ಸ್ಟಿವ್ ಸ್ಮಿತ್ 1, ಪೀಟರ್ ಹ್ಯಾಂಡ್ಸ್ಕಾಂಬ್ 3 ರನ್ ಗಳಿಸಿ ಆಡುತ್ತಿದ್ದಾರೆ.

ಆಸೀಸ್ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಗಾಯಾಳು ಉಸ್ಮಾನ್ ಖವಾಜ ಸ್ಥಾನಕ್ಕೆ ಪೀಟರ್ ಹ್ಯಾಂಡ್ಸ್ಕಾಂಬ್ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್ತಂಡ ವಿಶ್ವಕಪ್ಮಹಾಸಮರದ ದ್ವಿತೀಯ ಸೆಮಿಫೈನಲ್ನಲ್ಲಿ 5 ಬಾರಿಯ ಚಾಂಪಿಯನ್ಆಸ್ಪ್ರೇಲಿಯಾ ತಂಡವನ್ನು ಮುಖಾಮುಖಿಯಾಗುತ್ತಿದೆ. ಸಾಂಪ್ರದಾಯಕ ಎದುರಾಳಿ ಆಸ್ಪ್ರೇಲಿಯಾವನ್ನು ಮಣಿಸಬೇಕಾದರೆ ಆತಿಥೇಯರು ವಿಶೇಷ ಪ್ರಯತ್ನವನ್ನೇ ಮಾಡಬೇಕಿದೆ

ಕಳೆದ ಆವೃತ್ತಿಯಲ್ಲಿ ಮೊದಲ ಸುತ್ತಿನಲ್ಲೇ ಸ್ಪರ್ಧೆಯಿಂದ ನಿರ್ಗಮಿಸಿದ ಬಳಿಕ ಪರಿವರ್ತನೆಯ ಹಾದಿ ತುಳಿದಿದ್ದ ಇಂಗ್ಲೆಂಡ್ತಂಡ ಇದೀಗ ಏಕದಿನ ಮಾದರಿಯಲ್ಲಿ ಅತ್ಯಂತ ಪ್ರತಿಭಾನ್ವಿತ ತಂಡ ಎಂಬ ಹಣೆಪಟ್ಟಿ ಹೊತ್ತಿದೆ. ಹಾಲಿ ಆವೃತ್ತಿಯಲ್ಲಿ ಸೋಲುಗೆಲುವುಗಳ ಮಿಶ್ರ ಅನುಭವಗಳೊಂದಿಗೆ ಉಪಾಂತ್ಯ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ

1979, 1987 ಮತ್ತು 1992 ಆವೃತ್ತಿಗಳ ಫೈನಲ್ನಲ್ಲಿ ಮುಗ್ಗರಿಸಿದ್ದ ಇಂಗ್ಲೆಂಡ್ತಂಡ ಚೊಚ್ಚಲ ಕಿರೀಟಕ್ಕೆ ಇನ್ನೆರಡು ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಬೇಕಿದೆ. ಆದರೆ, ಇದುವರೆಗೆ ವಿಶ್ವಕಪ್ಸೆಮಿಫೈನಲ್ಪಂದ್ಯಗಳಲ್ಲಿ ಸೋಲನ್ನೇ ಕಾಣದಿರುವ ಆಸ್ಪ್ರೇಲಿಯಾ ತಂಡವನ್ನು ಹೇಗೆ ಕಟ್ಟಿಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ

ಕಾಂಗರೂ ಪಡೆ ನಾಲ್ಕು ತಿಂಗಳ ಹಿಂದೆ ಕಳಪೆ ಪ್ರದರ್ಶನದಿಂದಾಗಿ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡಿತ್ತು. ಆದರೆ ಮಾರ್ಚ್ನಲ್ಲಿ ಭಾರತದ ವಿರುದ್ಧ ಸರಣಿ ಗೆಲ್ಲುವುದರೊಂದಿಗೆ ಫಾರ್ಮ್ಕಂಡುಕೊಂಡ ಆ್ಯರೋನ್ಫಿಂಚ್ಬಳಗ, ಇದೀಗ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ

ಆಸ್ಪ್ರೇಲಿಯಾ ವಿರುದ್ಧದ ಕಳೆದ 12 ಮುಖಾಮುಖಿಗಳಲ್ಲಿ ಇಂಗ್ಲೆಂಡ್‌ 10ರಲ್ಲಿ ಗೆಲುವು ಸಾಧಿಸಿದೆ. ಆದರೆ ಲೀಗ್ಹಂತದಲ್ಲಿ ಇಯಾನ್ಮಾರ್ಗನ್ಬಳಗ ಆಸೀಸ್ವಿರುದ್ಧ 64 ರನ್ಸೋಲು ಕಂಡಿರುವುದು ಆತಿಥೇಯ ತಂಡದ ಆತ್ಮಸ್ಥೈರ್ಯವನ್ನು ಕುಗ್ಗಿಸಿದರೆ ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ(ಎಂ.ಎನ್)

Leave a Reply

comments

Related Articles

error: