ಮೈಸೂರು

ಗೃಹಿಣಿಯೋರ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ : ವರದಕ್ಷಿಣೆ ಕಿರುಕುಳ, ಕೊಲೆಯೆಂದು ಪೋಷಕರ ಆರೋಪ

ಮೈಸೂರು,ಜು.11:- ಗೃಹಿಣಿಯೋರ್ವರ ಮೃತದೇಹ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬನ್ನೂರಿನಲ್ಲಿ ನಡೆದಿದ್ದು, ಆಕೆಯ ಪೋಷಕರು ಕೊಲೆಯೆಂದು ಆರೋಪಿಸಿದ್ದಾರೆ.

ಚೈತ್ರಾ (24) ಮೃತ ದುರ್ದೈವಿಯಾಗಿದ್ದು, ಪತಿಯ ಮನೆಯಲ್ಲಿಯೇ ಚೈತ್ರಾ ಸಾವಿಗೀಡಾಗಿದ್ದಾಳೆ. ಚೈತ್ರಾಳನ್ನು ಗಂಡನ ಮನೆಯವರು ಕೊಲೆ ಮಾಡಿದ್ದಾರೆಂದು ಪೋಷಕರು ಆರೋಪಿಸಿ ಬನ್ನೂರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಂಟು ವರ್ಷಗಳ ಹಿಂದೆ ಕೆ .ಆರ್.ನಗರದ ಹಂಪಾಪುರದಿಂದ ಬನ್ನೂರಿನ ಸಿದ್ದರಾಜುಗೆ ಮದುವೆ ಮಾಡಿಕೊಡಲಾಗಿತ್ತು. ಮೃತಳಿಗೆ ಎರಡು ಗಂಡು ಮಕ್ಕಳಿವೆ. ವರದಕ್ಷಿಣೆ ತರುವಂತೆ ಒಂದು ವರ್ಷದಿಂದ ಪೀಡಿಸುತ್ತಿದ್ದರು ಎನ್ನಲಾಗಿದೆ. ಕಳೆದ ರಾತ್ರಿ ಚೈತ್ರಾಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ದೇಹವನ್ನು ಹಸ್ತಾಂತರಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: