ದೇಶಪ್ರಮುಖ ಸುದ್ದಿ

ರಾಜ್ಯಗಳಲ್ಲೂ ವಿದೇಶಾಂಗ ಇಲಾಖೆ ಕಚೇರಿ ಸ್ಥಾಪನೆಗೆ ಕೇಂದ್ರ ಚಿಂತನೆ

ನವದೆಹಲಿ: ದಿಲ್ಲಿಯ ಮೇಲಿನ ಒತ್ತಡ ತಗ್ಗಿಸಲು ಹಾಗೂ ಎಲ್ಲ ರಾಜ್ಯಗಳಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ರಾಜ್ಯಗಳ ರಾಜಧಾನಿಯಲ್ಲಿ ವಿದೇಶಾಂಗ ಇಲಾಖೆಯ ಕಚೇರಿ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯಗಳ ರಾಜಧಾನಿಗಳಲ್ಲಿ ವಿದೇಶ ಭವನದ ಹೆಸ​ರಿನ ಕಚೇರಿಗಳನ್ನು ತೆರೆಯುವ ಸಲುವಾಗಿ ಈಗಾಗಲೇ ಜಾಗ ಹಾಗೂ ಕಟ್ಟಡ ಹುಡುಕುವ ಕೆಲಸವನ್ನು ಪ್ರಾರಂಭಿಸಲಾಗಿದೆ. ವಿದೇಶಾಂಗ ಸಚಿವಾಲಯದ ಶಾಖಾ ಕಚೇರಿಗಳು, ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗಳು, ವಲಸೆ ವಿಭಾಗಕ್ಕೆ ಸಂಬಂಧಿಸಿದ ಕಚೇರಿಗಳನ್ನು ಈ ‘ವಿದೇಶ ಭವನ’ಗಳು ಹೊಂದಿರುತ್ತವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರವು ಕೇಂದ್ರ ಸರ್ಕಾರದ ಸುಪರ್ದಿಯಲ್ಲೇ ನಡೆಯಬೇಕಿದೆ. ಆದರೂ ಕೆಲ​ವೊಂದು​ ರಾಜ್ಯ ಸರ್ಕಾರಗಳು ಉದ್ಯಮ ಹಾಗೂ ಹೂ​ಡಿಕೆ ಸಂಬಂಧ ನೇರವಾಗಿ ನಿರ್ದಿಷ್ಟ ದೇಶಗಳ ಜತೆ ವ್ಯವಹಾರ ನಡೆಸುತ್ತಿವೆ. ಇದಕ್ಕೆ ಕೇಂದ್ರದ ತಕರಾರು ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಗಳಲ್ಲೂ ‘ವಿದೇಶ ಭವನ’ಗಳನ್ನು ಸ್ಥಾಪಿಸಿ, ರಾಜ್ಯಗಳ ವ್ಯವಹಾರವನ್ನು ಸರಳಗೊಳಿ ಅಂತಾರಾ​ಷ್ಟ್ರೀಯ ಸಂಪರ್ಕ-ವ್ಯಾಪಾರ ವೃದ್ಧಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.

ರಾಜ್ಯಗಳ ರಾಜಧಾನಿಯಲ್ಲಿ ವಿದೇಶ ಭವನ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿರುವ ವಿಷಯವನ್ನು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗೆ ವಿದೇಶಾಂಗ ಮಂತ್ರಾಲಯ ಟಿಪ್ಪಣಿ ಮೂಲಕ ತಿಳಿಯಪಡಿಸಿದೆ.

Leave a Reply

comments

Related Articles

error: