ಮೈಸೂರು

ಶ್ರೀರಂಗಾಚಾರ್ಲು ಸ್ಮಾರಕ ಭವನ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ

ಮೈಸೂರು ಶ್ರೀರಂಗಾಚಾರ್ಲು ಸ್ಮಾರಕ ಭವನ ಸಮಿತಿಯ ಅಧ್ಯಕ್ಷರಾಗಿ  ಮಹಾನಗರಪಾಲಿಕೆಯ 22ನೇ ವಾರ್ಡಿನ ಸದಸ್ಯ ಜೆ.ಎಸ್.ಜಗದೀಶ್ ಆಯ್ಕೆಯಾಗಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು.

ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ .ಎಂ.ಜೆ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಪಾಲಿಕೆ ಸದಸ್ಯ ಶ್ಯಾಮ್ ವಿರುದ್ಧ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದರು. ಬಳಿಕ ಮಾತನಾಡಿದ ಅವರು ವರ್ಷದ 365 ದಿನವೂ ಸಾರ್ವಜನಿಕರಿಗಾಗಿ ಪುರಭವನವನ್ನು ಮೀಸಲಾಗಿಡುವುದು ಮತ್ತು ಬಾಕಿ ಇರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದರು. ಪುರಸಭೆಗೆ ಹೈಟೆಕ್ ಸ್ಪರ್ಶ, ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.       ಸಮಿತಿಯ ಏಳು ಸದಸ್ಯರ ಪೈಕಿ ಜಗದೀಶ್ ಪರ ನಾಲ್ಕು ಮತಗಳು ದಾಖಲಾಗಿದ್ದವು. ಇನ್ನು ಸದಸ್ಯರಾಗಿ ಸ್ನಾಕ್ ಶ್ಯಾಂ, ಆಯೂಬ್ ಖಾನ್, ಪುಷ್ಪಲತಾ, ಭಾಗ್ಯವತಿ, ಬಿ.ವಿ.ಮಂಜುನಾಥ ಆಯ್ಕೆಯಾಗಿದ್ದಾರೆ.

Leave a Reply

comments

Related Articles

error: