ಕರ್ನಾಟಕಪ್ರಮುಖ ಸುದ್ದಿ

ಆರೋಪ ಸಾಬೀತಾದ್ರೆ ರಾಜೀನಾಮೆ ಕೊಡ್ತೀರಾ? ಸಿದ್ದರಾಮಯ್ಯಗೆ ಯಡಿಯೂರಪ್ಪ ಮತ್ತೆ ಸವಾಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಡುವಿನ ವಾಕ್ಸಮರ ಮುಂದುವರೆದಿದದ್ದು, ಸಿದ್ದರಾಮಯ್ಯಗೆ ಬಿ.ಎಸ್.ವೈ. ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ “ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌’ಗೆ ಒಂದು ಸಾವಿರ ಕೋಟಿ ಹಣ ನೀಡಿದ್ದಾರೆ” ಎಂದು ಯಡಿಯೂರಪ್ಪ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಯಡಿಯೂರಪ್ಪ ಭಂಡ ರಾಜಕಾರಣಿ, ಅವರ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ಈ ಆರೋಪ ಸಾಬೀತಾದರೆ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ” ಹೇಳಿದ್ದರು.

ಇದೀಗ ಮತ್ತೆ ಸಿದ್ದರಾಮಯ್ಯಗೆ ಸವಾಲು ಹಾಕಿರುವ ಬಿಎಸ್‌ವೈ, ಆರೋಪ ಸಾಬೀತುಪಡಿಸಿದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಗೋವಿಂದ ರಾಜ್ ಅವರು ಡೈರಿಯಲ್ಲಿ 65 ಕೋಟಿ ಅಂತ ಬರೆದಿರುವುದು ಸುಳ್ಳಲ್ಲ ಎಂದಿರುವ ಅವರು “ನನ್ನ ಬಗ್ಗೆ ನೀವು ಹಗುರವಾಗಿ ಮಾತನಾಡಬೇಡಿ. ಆರೋಪ ಸಾಬೀತಾದ್ರೆ ರಾಜೀನಾಮೆ ಕೊಡ್ತೀರಾ?” ಎಂದು ಮುಖ್ಯುಮಂತ್ರಿ ಸಿದ್ದರಾಮಯ್ಯಗೆ ಪ್ರತಿಸವಾಲು ಹಾಕಿದ್ದಾರೆ.

Leave a Reply

comments

Related Articles

error: