ಪ್ರಮುಖ ಸುದ್ದಿಮೈಸೂರು

ರಾಜಕೀಯ ಪುನರ್ ಜನ್ಮ ನೀಡಿದ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಹೆಚ್. ವಿಶ್ವನಾಥ್ : ಅಯೂಬ್ ಖಾನ್

ರಾಜೀನಾಮೆ ನೀಡಿದ ಶಾಸಕರ ಮಂಪರು ಪರೀಕ್ಷೆಗೆ ಒತ್ತಾಯ

ಮೈಸೂರು,ಜು.12 : ಜಾತ್ಯತೀತ ಸಿದ್ಧಾಂತಗಳ ನಿಲುವಿನಲ್ಲಿ ಸಂವಿಧಾನದ ಪಾಠ ಮಾಡುತ್ತಾ, ದೀನ ದಲಿತರ ಹಾಗೂ ಸಮಾಜ ಹಿತಕಾಯುವೆ ಎಂದು ಹೇಳುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಎಚ್.ವಿಶ್ವನಾಥ್ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗಿದ್ದಾರೆ ಎಂದು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಅಯೂಬ್ ಖಾನ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಪುನರ್ ಜನ್ಮ ನೀಡಿದ ಜೆಡಿಎಸ್ ಗೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಮೂಲಕ ವಿಶ್ವನಾಥ್ ಅವರು ರಾಜಕಾರಣದ ಅಂತಿಮ ದಿನಗಳಲ್ಲಿ ನೀಚ ಕೃತ್ಯ ಮಾಡಿದ್ದಾರೆ  ಎಂದು ಕಿಡಿಕಾರಿದರು.

ಮಂಪರು ಪರೀಕ್ಷೆ :

ರಾಜ್ಯದಲ್ಲಿ ಬರವಿದೆ, ಕುಡಿಯುವ ನೀರಿನ ಆಹಾಕಾರ, ಹಸು ಕರುಗಳಿಗೆ ಮೇವಿನ ಕೊರತೆ, ಅಲ್ಲದೇ ರೈತರು ಸಂಕಷ್ಟಗಳಿಗೆ ಸ್ಪಂದಿಸದ ಭ್ರಷ್ಟಾ ಶಾಸಕರಿಂದು ಕೋಟ್ಯಾಂತರ ರೂ.ಗಳಿಗೆ ಬಿಕರಿಯಾಗಿದ್ದಾರೆ. ಇವರಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗಿದ್ದು, ಈ ಶಾಸಕರನ್ನು ಮಂಪರು ಪರೀಕ್ಷೆಗೊಳಪಡಿಸುವ  ಮೂಲಕ ಸತ್ಯಾಂಶ ಹೊರ ಹಾಕಬೇಕಾಗಿದೆ, ಒಂದೊಮ್ಮೆ ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ಇವರುಗಳು ಎಷ್ಟು ಹಣಕ್ಕೆ ಮಾರಾಟವಾಗಿದ್ದಾರೆಂದು ದಾಖಲೆ ಸಮೇತ ಬಿಡುಗಡೆಗೊಳಿಸುವೆ ಎಂದು ತಿಳಿಸಿದರು.

ಪಕ್ಷದ ಪದಾಧಿಕಾರಿಗಳಾದ ಗುರುಲಿಂಗಯ್ಯ, ಸುಬ್ಬಯ್ಯ, ಸರ್ದಾರ್ ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: