ಮೈಸೂರು

ಕೊಲೆ ರಹಸ್ಯವನ್ನು ಭೇದಿಸಲು ಕೆರೆಯ ನೀರನ್ನು ಖಾಲಿ ಮಾಡಿಸುತ್ತಿರುವ ಪೊಲೀಸರು

ಕೊಲೆ ರಹಸ್ಯವೊಂದನ್ನು  ಭೇದಿಸಲು ಇಡೀ ಕೆರೆ ನೀರು ಖಾಲಿ ಮಾಡಿದ ಘಟನೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಕೆರೆಯಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದು ಶವ ಬಿಸಾಡಿದ್ದೇವೆಂದು ಹಂತಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶವ ಶೋಧಕ್ಕಾಗಿ ಖುದ್ದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ನಾಲ್ಕು ದಿನಗಳಿಂದ ಹಗಲಿರುಳೆನ್ನದೇ ನೀರು ಖಾಲಿ ಮಾಡುವ ಕಾರ್ಯ ನಡೆಯುತ್ತಿದೆ.

ಸ್ಥಳದಲ್ಲಿ ಕುತೂಹಲದಿಂದ ನೂರಾರು ಗ್ರಾಮಸ್ಥರು ಸೇರಿದ್ದು, ಶವವನ್ನು ಎತ್ತಲು ನೀರನ್ನೇಕೆ ಖಾಲಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ತಜ್ಞ ಈಜುಗಾರರ ನೆರವನ್ನು ಪಡೆಯಬಹುದಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.

ಆದರೆ ಯಾವ ಪ್ರಕರಣ ಎಂಬುದರ ಕುರಿತು ಇನ್ನೂ ಪೊಲೀಸ್ ಪಡೆ ತುಟಿ ಎರಡು ಮಾಡಿಲ್ಲ. ಕೊಲೆ ಪ್ರಕರಣ ಸಂಬಂಧ ಕೆರೆಯಲ್ಲಿ ನೀರೆತ್ತುವ  ಮತ್ತು ಶೋಧಕಾರ್ಯ ಮುಂದುವರಿದಿದೆ. ಕೆರೆಯ ನೀರಲ್ಲಿ ಎರಡು ಮೊಬೈಲ್ ಫೋನ್ ಗಳು ಪತ್ತೆಯಾಗಿದ್ದು, ಅವುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

Leave a Reply

comments

Related Articles

error: