ಲೈಫ್ & ಸ್ಟೈಲ್

ನಾಯಿ ಕಡಿದರೆ ಭಯ ಬೀಳದೇ ಸೂಕ್ತ ಪ್ರಾಥಮಿಕ ಚಿಕಿತ್ಸೆ ಪಡೆಯಿರಿ

ಇತ್ತೀಚಿನ ದಿನಗಳಲ್ಲಿ ನಾಯಿಯ ಹಾವಳಿ ಹೆಚ್ಚುತ್ತಿದ್ದು, ಜನರನ್ನು ಕಡಿಯುವುದರಲ್ಲಿ ತೊಡಗಿಸಿಕೊಂಡಿದೆ. ನಾಯಿ ಎಲ್ಲರಿಗೂ ಪ್ರೀತಿಯ ಪ್ರಾಣಿ ಆದರೂ ಅದನ್ನು ನೋಡಿದಾಗ ಭಯ ಹುಟ್ಟುವುದು ಸಹಜ. ನಾಯಿ ಕಡಿದ ಸಂದರ್ಭದಲ್ಲಿ ಕೆಲವರು ತುಂಬಾನೆ ಭಯಗೊಳ್ಳುತ್ತಾರೆ. ನಮ್ಮ ಪ್ರಾಣಕ್ಕೆ ಸಂಚಕಾರ ಬರಬಹುದೇನೋ ಎಂದು ಆತಂಕಕ್ಕೆ ಒಳಗಾಗುತ್ತಾರೆ. ಕಡಿದ ತಕ್ಷಣ ಸೂಕ್ತ ಪ್ರಾಥಮಿಕ ಚಿಕಿತ್ಸೆಗಳನ್ನು ಪಡೆದರೆ ಯಾವುದೇ ಅಪಾಯ ಸಂಭವಿಸುವುದಿಲ್ಲ. ಯಾವ ರೀತಿ ಪ್ರಾಥಮಿಕ ಚಿಕಿತ್ಸೆ ತೆಗೆದುಕೊಳ್ಳಬೇಕೆನ್ನುವುದು ಹಲವರಿಗೆ ತಿಳಿದಿಲ್ಲ. ಇಲ್ಲಿದೆ ಸರಳ ಉಪಾಯ.

ನೀರಿನಲ್ಲಿ ತೊಳೆದುಕೊಳ್ಳಿ : ಯಾವ ಜಾಗದಲ್ಲಿ ನಾಯಿ ಕಡಿದಿದೆಯೋ ಆ ಜಾಗವನ್ನು ಸ್ವಚ್ಛನೀರಿನಿಂದ ತೊಳೆದುಕೊಳ್ಳಿ. ಇದರಿಂದ ಗಾಯದಲ್ಲಿ ಬ್ಯಾಕ್ಟಿರಿಯಾ ಸೇರುವ ಅಪಾಯ ಕಡಿಮೆ ಇರಲಿದೆ.

ಗಾಯವನ್ನು ಒತ್ತಬೇಡಿ : ಕಡಿದ ಗಾಯದಲ್ಲಿ ರಕ್ತ ಸೋರುತ್ತಿದ್ದರೆ ಅದನ್ನು ಒತ್ತಬೇಡಿ. ಸ್ವಲ್ಪ ಸಮಯದವರೆಗೆ ರಕ್ತ ಹರಿಯಲು ಬಿಡಿ.

ಆ್ಯಂಟಿ ಬಯೋಟಿಕ್ ಕ್ರೀಮ್ ಹಚ್ಚಿ : ಗಾಯದ ಮೇಲೆ ಆ್ಯಂಟಿ ಬಯೋಟಿಕ್ ಕ್ರೀಮ್ ನ್ನು ಹಚ್ಚಿ. ಇದು ಇನ್ ಫೆಕ್ಷನ್ ಪೂರ್ತಿ ಶರೀರ ವ್ಯಾಪಿಸುವುದನ್ನು ತಡೆಗಟ್ಟುತ್ತದೆ.

ಬ್ಯಾಂಡೇಜ್ ಹಾಕಿರಿ : ಗಾಯದ ಮೇಲೆ ಬ್ಯಾಂಡೇಜ್ ಸುತ್ತಿರಿ. ಪರಿಸರದಲ್ಲಿರುವ ಬ್ಯಾಕ್ಟಿರಿಯಾಗಳು ಗಾಯದೊಳಗೆ ಪ್ರವೇಶಿಸುವುದಿಲ್ಲ.

ವೈದ್ಯರಿಂದ ಚಿಕಿತ್ಸೆ ಪಡೆಯಿರಿ : ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ವೈದ್ಯರಲ್ಲಿಗೆ ಹೋಗಿ. ಅವರ ಸಲಹೆಯ ಮೇರೆಗೆ ಟಿಟನಸ್ ಇಂಜೆಕ್ಷನ್ ಪಡೆಯಿರಿ.

ಈ ರೀತಿ ಪ್ರಾಥಮಿಕ ಚಿಕಿತ್ಸೆಯನ್ನು ಪಾಲಿಸುವುದರಿಂದ ನಾಯಿ ಕಡಿತದ ಗಾಯ ಬಲುಬೇಗನೆ ಶಮನಗೊಳ್ಳಲಿದೆ.

Leave a Reply

comments

Related Articles

error: