ಸುದ್ದಿ ಸಂಕ್ಷಿಪ್ತ

ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ ನಾಳೆ

ಮೈಸೂರು,ಜು.13 : ಮಹಾರಾಜ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ, ವಿದ್ಯಾಸಂಸ್ಥೆ ಸಂಸ್ಥಾಪಕ ಮುಮ್ಮಡಿ ಕೃಷ್ಣರಾಜ ಒಡೆಯರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಜು.14ರ ಬೆಳಗ್ಗೆ 10.30 ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ.

ಶಾಸಕ ಎಲ್.ನಾಗೇಂದ್ರ, ಹಿರಿಯ ರಂಗಕರ್ಮಿ ಎಂ.ಎಸ್.ಸತ್ಯು, ಡಾ.ಸಿ.ಡಿ.ಶ್ರೀನಿವಾಸಮೂರ್ತಿ, ಡಾ.ಚಂದ್ರಶೇಖರ್, ಹಿರಿಯ ನಾಗರೀಕರ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಗೌಡಪ್ಪ, ಸಾರಿಗೆ ಇಲಾಖೆ ಜಂಟಿ ಆಯುಕ್ತ ಎಂ.ಎನ್.ಬಾಲದೇವರಾಜೇ ಅರಸ್ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: