ಸುದ್ದಿ ಸಂಕ್ಷಿಪ್ತ

ಜು.16ರಂದು ಗುರುಪೂರ್ಣಿಮೆ : ಯೋಗ ಪರಂಪರೆ ಛಾಯಾಚಿತ್ರ ಪ್ರದರ್ಶನ

ಮೈಸೂರು,ಜು.13 : ನಮೋ ಯೋಗ ಭವನದಿಂದ ಗುರುಪೂರ್ಣಿಮ ಕಾರ್ಯಕ್ರಮ ಮೈಸೂರು ಯೋಗ ಪರಂಪರೆ ಛಾಯಾಚಿತ್ರ ಪ್ರದರ್ಶನವನ್ನು ಜು.16ರ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.

ಜಿ.ಎಸ್.ಎಸ್.ಯೋಗ ಫೌಂಡೇಷನ್ ಸಂಸ್ಥಾಪಕ ಹರಿ ಗುರೂಜೀ ಉದ್ಘಾಟಿಸುವರು, ಸಮಾಜ ಸೇವಕ ಕೆ.ರಘುರಾಮಯ್ಯ ವಾಜಪೇಯಿ ಗುರುಪೂರ್ಣಿಮ ಸಾಂಕೇತ ಉದ್ಘಾಟಿಸುವರು. ರಾಷ್ಟ್ರೀಯ ಯೋಗ ಚಾಂಪಿಯನ್ ಯೋಗ ಪ್ರಕಾಶ ಅಧ್ಯಕ್ಷತೆ ವಹಿಸುವರು.

ಯೋಗ ಗುರುಗಳಾದ ವೆಂಕಟೇಶಯ್ಯ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮೈಸೂರು ಯೋಗ ಅಧ್ಯಕ್ಷರು ಅಸೋಸಿಯೇಷನ್ ಸಿ.ರಮೇಶ್ ಮೊದಲಾದವರು ಉಪಸ್ಥಿತಿರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: