ಮೈಸೂರು

ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ

ಮೈಸೂರು,ಜು.13:- ಮೈಸೂರು ಲಿಟರರಿ ಫೋರಮ್ ಚಾರಿಟೇಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ ಸಂಯುಕ್ತಾಶ್ರಾಯದಲ್ಲಿ  “ಸಾಹಿತ್ಯ ಸಂಭ್ರಮ” ಕಾರ್ಯಕ್ರಮವನ್ನು ಇಂದು  ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಸರ್ದನ್ ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಸಾಹಿತ್ಯ ಸಂಭ್ರಮಕ್ಕೆ ರಾಜಮಾತೆ ಪ್ರಮೋದಾ ದೇವಿ ಶುಭಾಶಯ ಕೋರಿದರು.

ಇದೇ ಸಂದರ್ಭ ಚಲನಚಿತ್ರ ನಿರ್ಮಾಪಕ ಟಿ.ಎಸ್.ನಾಗಾಭರಣ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿದರು. ಹಿರಿಯ ಸಾಹಿತಿ ದಿ.ಗಿರೀಶ್ ಕಾರ್ನಾಡ್ ಅವರ ಬರಹ ಕುರಿತು ಎರಡು ಸಭಾಂಗಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯ ಕುರಿತು ಗೋಷ್ಠಿಗಳು ನಡೆಯಿತು. ಮಕ್ಕಳಿಗಾಗಿಯೇ ಒಂದು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್,ಲೇಖಕ ದೇವದತ್ತ ಪಟ್ನಾಯಕ್, ಸ್ಯಾಮ್ ಚೆರಿಯನ್ ಕುಂಬುಕಟ್ಟು, ಸುಚಿತಾ ಸಂಜಯ್,ಶುಭ ಸಂಜಯ್ ಅರಸ್, ಕನ್ನಡ ಸಾಹಿತ್ಯ ವಲಯದ ಹಲವಾರು ನಿರ್ದೇಶಕರು, ಲೇಖಕರು ಸೇರಿದಂತೆ ಹಲವರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: