ಮೈಸೂರು

ಟಿ.ನರಸೀಪುರ ತಾಲೂಕಿನ ಹಿಟ್ಟುವಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಡಾ.ಯತೀಂದ್ರ ಗುದ್ದಲಿಪೂಜೆ

ಮೈಸೂರು,ಜು.13:- ಟಿ.ನರಸೀಪುರ ತಾಲೂಕಿನ ಹಿಟ್ಟುವಳ್ಳಿ ಗ್ರಾಮದಲ್ಲಿ ವರುಣಾ ಕ್ಷೇತ್ರದ ಶಾಸಕ  ಡಾ.ಯತೀಂದ್ರ ಸಿದ್ದರಾಮಯ್ಯ   ಇಂದು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಸಮ್ಮಿಶ್ರ 5ವರ್ಷ ಪೂರೈಸುವುದರ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ    ತಿರುಗೇಟು ನೀಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ  ಜಿ.ಟಿ ದೇವೇಗೌಡರು ಯಾಕೆ ಈ ರೀತಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ.  ಬಿಜೆಪಿಯವರು ಪದೇ ಪದೇ ಈ ರೀತಿ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದನ್ನು ನೋಡಿ ಮುಂದಿನ ದಿನವು ಕೂಡ ಸಮಸ್ಯೆ ಉಂಟಾಗುತ್ತದೆ ಎಂಬ ಮನೋಭಾವನೆಯಿಂದ ಜಿಟಿ ದೇವೇಗೌಡರು ಈ ರೀತಿ ಹೇಳಿಕೆ ನೀಡಿರಬಹುದು. ಆದರೆ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ಅಧಿಕಾರ ನಡೆಸುತ್ತದೆ ಎಂದರು.

ಅತೃಪ್ತ ಶಾಸಕರನ್ನು ನಮ್ಮ ನಾಯಕರು ಮನವೊಲಿಸುತ್ತಿದ್ದಾರೆ.  ಅಲ್ಲದೇ ಖುದ್ದು ಮುಖ್ಯಮಂತ್ರಿಗಳೇ ಅತೃಪ್ತರ ಮನವೊಲಿಸುತ್ತಿದ್ದಾರೆ.  ಇದೊಂದು ಪರಿಸ್ಥಿತಿ ಮೈತ್ರಿ ಪಕ್ಷ ಎದುರಿಸಿದರೆ ಇನ್ನುಳಿದ 4ವರ್ಷ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ.  ನಾವು ನಮ್ಮ ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಆದ್ದರಿಂದ ನಾವು ಆ ಕೆಲಸವನ್ನು ವಿಶ್ವಾಸದಿಂದ ಮಾಡಬೇಕು.  ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.  ಮುಖ್ಯಮಂತ್ರಿಗಳು ಸರ್ಕಾರದ ಮೇಲೆ ತುಂಬಾ ವಿಶ್ವಾಸ ಹೊಂದಿದ್ದಾರೆ. ಕೆಲ ಅತೃಪ್ತ ಶಾಸಕರನ್ನು ಸೆಳೆದರೆ ಉಳಿದ ಅತೃಪ್ತ ಶಾಸಕರು ಬರುವ ವಿಶ್ವಾಸವಿದೆ ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: