ಪ್ರಮುಖ ಸುದ್ದಿ

ಕುಶಾಲನಗರ ಸಾಯಿ ಮಂದಿರ : ಗುರುಪೂರ್ಣಿಮೆ ಪ್ರಯುಕ್ತ ಜು.16 ರಂದು ವಿಶೇಷ ಪೂಜೆ

ರಾಜ್ಯ(ಮಡಿಕೇರಿ) ಜು.13 : – ಕುಶಾಲನಗರದ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಜು. 16 ರಂದು ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ಅಂದು ಬೆಳಗ್ಗೆ 6 ಗಂಟೆಗೆ ಕಾಕಡ ಆರತಿ, 6.30ಕ್ಕೆ ಭಕ್ತಾದಿಗಳಿಂದ ಕ್ಷೀರಾಭಿಷೇಕ, ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಆರತಿ, ಸಂಜೆ 5.30ಕ್ಕೆ ಸಾಯಿಬಾಬಾ ಅಷ್ಠೋತ್ತರ, ಸಂಜೆ 6 ಗಂಟೆಗೆ ಭಜನೆ, 6.30ಕ್ಕೆ ಧೂಪದಾರತಿ, 6.45ಕ್ಕೆ ಪ್ರಸಾದ ವಿನಿಯೋಗ ಮತ್ತು ರಾತ್ರಿ 8 ಗಂಟೆಗೆ ಶೇಜಾರತಿ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಾಗಲಿದೆ.
ವಿಶೇಷ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಅಂದು ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಲು ಇಚ್ಚಿಸುವವರು ಹಾಗೂ ಶ್ರೀಸತ್ಯನಾರಯಣ ಪೂಜೆ ಮಾಡಿಸುವವರು ಹೆಚ್ಚಿನ ಮಾಹಿತಿಗೆ 6363396141, 9742928398, 9900480538 ನ್ನು ಸಂಪರ್ಕಿಸಬಹುದಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: