ದೇಶಪ್ರಮುಖ ಸುದ್ದಿ

ಆ್ಯಪಲ್ ಐಫೋನ್‍ನಲ್ಲೂ ಭೀಮ್ ಆ್ಯಪ್ ಲಭ್ಯ

ಮುಂಬೈ: ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣಗೊಳಿಸಿದ ನಂತರ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನಕ್ಕೆ ಪೂರಕವಾಗಿ ಬಿಡುಗಡೆ ಮಾಡಿರುವ ಭಾರತ್‍ ಇಂಟರ್‍ಫೇಸ್ ಮನಿ – ಭೀಮ್ ಆ್ಯಪ್‍ ಈಗ ಆ್ಯಪಲ್‍ ಐಫೋನ್‍ನಲ್ಲೂ ಕೂಡ ಲಭ್ಯವಾಗಲಿದೆ.

ಈ ಕುರಿತು ನ್ಯಾಷನಲ್‍ ಪೇಮೆಂಟ್ಸ್ ಕಾರ್ಪೊರೇಷನ್‍ ಸಂಸ್ಥೆಯು ಹೇಳಿಕೆ ನೀಡಿದ್ದು, ಆಧಾರ್ ಜೋಡಿಸಿದ ಪಾವತಿ ವ್ಯವಸ್ಥೆಗಾಗಿ ಪ್ರಾರಂಭಿಸಲಾಗಿರುವ ಭೀಮ್ ಆ್ಯಪ್ ಸೌಲಭ್ಯವನ್ನು ಐಫೋನ್’ಗಳಿಗೂ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಐಫೋನ್ ಬಳಕೆದಾರರೂ ಸಹ ಭೀಮ್ ಆಪ್ ಅನ್ನು ಬಳಕೆ ಮಾಡಬಹುದಾಗಿದೆ.

ಐಫೋನ್’ಗಳಲ್ಲೂ ಭೀಮ್ ಆಪ್ ಅನ್ನು ಪರಿಚಯಿಸಲಾಗಿದ್ದು, ಶೇ.100ರಷ್ಟು ಸ್ಮಾರ್ಟ್’ಫೋನ್ ಬಳಕೆದಾರರು ಭೀಮ್ ಆಪ್ ಅನ್ನು ಬಳಕೆ ಮಾಡುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ನಗದುರಹಿತ ವಹಿವಾಟು ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಎನ್‍ಪಿಸಿಐ ತಿಳಿಸಿದೆ.

Leave a Reply

comments

Related Articles

error: