ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ; ಓರ್ವನ ಬಂಧನ : ಮೂವರು ಮಹಿಳೆಯರ ರಕ್ಷಣೆ

ಮೈಸೂರು,ಜು.15:- ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ   14/07/2019 ರಂದು ಲಷ್ಕರ್ ಪೊಲೀಸ್ ಠಾಣೆ ಸರಹದ್ದು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಮುದ್ರ ಮೈಸೂರು ಎಂಬ ಹೋಟೆಲ್‍ನ 4ನೇ ಮಹಡಿಯಲ್ಲಿರುವ ಆಯುರ್ ಟಚ್ ಎಂಬ ಆಯುರ್ವೇದಿಕ್ ಸ್ಪಾ ಮೇಲೆ ದಾಳಿ ಮಾಡಿ ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮನು ಫಿಲಿಪ್.ಸಿ.ಎಂ. ಬಿನ್ ಮೈಕಲ್ (30), ಮ್ಯಾನೇಜರ್, ಆಯುರ್ ಟಚ್ ಆಯುರ್ವೇದಿಕ್ ಸ್ಪಾ, Chalamadathil house, Kezhuvamkulam Post, Kottayam District, Kerala State. ಎಂದು ಗುರುತಿಸಲಾಗಿದ್ದು,  ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ  ಮೃದುಲ್ ರಾಜ್ ಬಿನ್ ರಾಜೀವನ್( 27), ತೈಕಂಡಿ ಹೌಸ್, ವಲಿಯಾನೂರು, ವಾರಮ್ ಫೋಸ್ಟ್, ಕಣ್ಣೂರು ತಾಲೂಕು & ಜಿಲ್ಲೆ. ಕೇರಳ ರಾಜ್ಯ, ಸುದೀರ್ ಬಾಬು ಬಿನ್ ಗೋಪಾಲನ್, (46), ರೋಹಿಣಿ ನಿವಾಸ್, ಮುನ್ನೂಪೇರಿಯಾ ಗ್ರಾಮ, ಮಾವಿಲೈ ಫೋಸ್ಟ್, ಮುಂದಲೂರು ರಸ್ತೆ, ಕಣ್ಣೂರು ತಾ & ಜಿಲ್ಲೆ, ಕೇರಳಾ ರಾಜ್ಯ, ಪ್ರಜೇಶ್ ಪಿ ಬಿನ್ ಭಾಸ್ಕರನ್,( 41), ಪಾಡಿಚಲ್ ಹೌಸ್, ವಲಿಯನೂರು ಗ್ರಾಮ, ಮಾರಮ್,ಪೊಸ್ಟ್, ಕಣ್ಣೂರು ತಾ & ಜಿಲ್ಲೆ, ಕೇರಳ ರಾಜ್ಯ, ಧನೀಶ್‍ಕರ್ ಬಿನ್ ದಿವಾಕರ್ ಕುಮಾರ್ ವರ್ಮ (25), ನೋಟುಮುದ್ರಣಾ ನಗರ, ಮೈಸೂರು. ಖಾಯಂ ವಿಳಾಸ  ಮೆಹನೂರ್ ಗ್ರಾಮ, ತುಂಗ್ಗಿ ಫೋಸ್ಟ್, ನಳಂದ ತಾ & ಜಿಲ್ಲೆ ಬಿಹಾರ-803101, ಸಜೀತ್ ಬಿನ್ ಮಾದವನ್ (42)  ಚುಲೋಟಲ್ ಹೌಸ್, ಕುಡಾಳಿ ಫೊಸ್ಟ್, & ಗ್ರಾಮ, ತಲಚೇರಿ ತಾಲ್ಲೂಕು, ಕಣ್ಣೂರು ಜಿಲ್ಲೆ ಕೇರಳ ರಾಜ್ಯ, ಪ್ರದೀಪ ವಿ ಬಿನ್ ವಾಸು ವಿ, (42 ), ವೆಳಿಯಾತೋಡಿ ಹೌಸ್ ಪಟ್ಟಾರಕ ಏರಿಯಾ, ನಿಲಂಬೂರ್ ತಾಲೂಕು, ಮಲಪುರಂ ಜಿಲ್ಲೆ, ಕೇರಳ ರಾಜ್ಯ, ರಿಜೇಶ್ ಬಿನ್ ರಾಮಚಂದ್ರ, (36) ನಂ. 169 ಎಫ್ (188ಎಫ್), ಕುನ್ನತ ಹೌಸ್, ಎಡಕ್ಕಾಡ್, ಏರಿಯಾ, ಕಣ್ಣೂರು ಫೋ & ತಾ & ಜಿಲ್ಲೆ ಕೇರಳ ರಾಜ್ಯ ಎಂಬವರನ್ನು ವಶಕ್ಕೆ ಪಡೆದು, ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದ 15,000 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದು, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು)  ಮುತ್ತುರಾಜ್   ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಲಿಂಗಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸಪೆಕ್ಟರ್ ಎ.ಮಲ್ಲೇಶ್, ಲಷ್ಕರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುನಿಯಪ್ಪ, ಪಿ.ಎಸ್.ಐ.   ಪೂಜಾ ಹತ್ತರಕಿ ಹಾಗೂ ಸಿಬ್ಬಂದಿಗಳಾದ ಜೋಸೆಫ್ ನರೋನ, ಪುರುಷೋತ್ತಮ, ಅರುಣ್‍ಕುಮಾರ್, ರಘು, ಮಹದೇವಸ್ವಾಮಿ, ಪರಶಿವಮೂರ್ತಿ, ಲಿಂಗರಾಜು, ಆದಂ, ಲೋಕೇಶ್, ಪ್ರದೀಪ, ಕಾಳಪ್ಪ, ಶ್ರೀನಿವಾಸ್, ಶಿವರಾಜು, ರಾಜಶ್ರೀ ಜಾಲವಾದಿ, ಮಂಜುಳಾ, ಮಂಗಳಮ್ಮ  ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: