ಮೈಸೂರು

ವಿಕಲಚೇತನರ ಶಾಲೆಯಲ್ಲಿ ಸಂಭ್ರಮದಿಂದ ನಡೆದ ವಾರ್ಷಿಕೋತ್ಸವ

ಸೈಕಲ್ ಪ್ಯೂರ್‍ ಅಗರಬತ್ತೀಸ್‍ ತಯಾರಕರಾಗಿರುವ ಎನ್‍ ಆರ್ ಸಮೂಹದ ಚಾರಿಟಬಲ್ ಟ್ರಸ್ಟ್ ಆಗಿರುವ ಎನ್‍ಆರ್ ಫೌಂಡೇಶನ್ ವತಿಯಿಂದ ನಡೆಸಲಾಗುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯಲ್ಲಿ 29ನೇ ವಾರ್ಷಿಕ ದಿನಾಚರಣೆಯನ್ನುಸಂಭ್ರಮ-ಸಡಗರದಿಂದ ಆಚರಿಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಜೆ.ಶಶಿಧರ್‍ಪ್ರಸಾದ್ ಹಾಗೂ ಮೈಸೂರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಚ್.ಆರ್.ಶ್ರೀನಿವಾಸ್‍  ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಜೆ.ಶಶಿಧರ್‍ಪ್ರಸಾದ್  ನಮ್ಮ ಮಕ್ಕಳಿಗೆ ಎಷ್ಟು ಉತ್ತಮ ಭವಿಷ್ಯವನ್ನು ನಿರ್ಮಿಸಿ ಕೊಡುತ್ತೇವೆ ಎನ್ನುವುದರ ಮೇಲೆ ನಮ್ಮದೇಶದ ಭವಿಷ್ಯ ಅಡಗಿರುತ್ತದೆ ಎಂದರು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಜೊತೆಗೆ ಜೀವನ ಕೌಶಲ್ಯವನ್ನೂ ನಾವು ನೀಡಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ಖಚಿತ ಎಂದು ಅಭಿಪ್ರಾಯ ಪಟ್ಟರು. ಶಾಲೆಯ ಅಧ್ಯಕ್ಷ  ಆರ್. ಗುರು ಈ ಸಂದರ್ಭ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ದಾಸರ ಪದ, ಕೋಲಾಟ, ಶಿಶುಗೀತಾ ನೃತ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Leave a Reply

comments

Related Articles

error: