ಮೈಸೂರು

ಗ್ಯಾಸ್ ಬಂಕ್ ನಲ್ಲಿ ಹಣದ ಬ್ಯಾಗ್ ಕಸಿದು ಪರಾರಿಯಾದ ಕಳ್ಳರು!

ಗ್ಯಾಸ್ ಬಂಕ್ ಒಂದಕ್ಕೆ ಪೆಟ್ರೋಲ್ ಕೇಳಿ ಬಂದ ಯುವಕರೀರ್ವರು ಕ್ಯಾಶಿಯರ್ ಕೈಲಿದ್ದ ಹಣದ ಬ್ಯಾಗ್ ಕಸಿದು ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿದ್ಯಾರಣ್ಯಪುರಂ ಬಳಿ ಇರುವ ಎಲೆತೋಟದ ಗ್ಯಾಸ್ ಬಂಕ್ ಒಂದಕ್ಕೆ ರಾಯಲ್ ಎನ್ ಫೀಲ್ಡ್  ಬುಲೆಟ್ ಗಾಡಿಯಲ್ಲಿ ಬಂದ 27ರ  ಆಸುಪಾಸಿನ ಯುವಕರಿಬ್ಬರು ಅಲ್ಲಿನ ಕ್ಯಾಶಿಯರ್ ಬಳಿ ಪೆಟ್ರೋಲ್ ಇದೆಯಾ ಎಂದು ವಿಚಾರಿಸಿದ್ದಾರೆ. ಆತ ಇಲ್ಲ ಇದು ಗ್ಯಾಸ್ ಬಂಕ್ ಎಂದು ಹೇಳುವಷ್ಟರಲ್ಲಿ ಆತನ ಕೈಯ್ಯಲ್ಲಿದ್ದ ಹಣದ ಬ್ಯಾಗ್ ನ್ನು ಎಗರಿಸಿದ್ದಾರೆ. ಬ್ಯಾಗ್ ನಲ್ಲಿ ಬೆಳಗಿನ ಕಲೆಕ್ಷನ್ ಅಂದಾಜು ಸುಮಾರು 70ಸಾವಿರ ರೂ.ಗಳಿತ್ತು ಎಂದು ತಿಳಿದುಬಂದಿದೆ. ತಕ್ಷಣ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸ್ಥಳಕ್ಕೆ ಇನ್ಸಪೆಕ್ಷರ್ ರಘು, ಸಬ್ ಇನ್ಸಪೆಕ್ಟರ್ ಅನುಷಾ ಮತ್ತು ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಸುತ್ತಮುತ್ತಲು ಅಳವಡಿಸಲಾದ ಸಿಸಿ ಕ್ಯಾಮರಾ ಫೂಟೇಜ್ ವೀಕ್ಷಿಸಿದ್ದರು. ಆದರೆ ಪೊಲೀಸರಿಗೆ ಏನೂ ಕಂಡು ಬಂದಿರಲಿಲ್ಲ. ಅನುಮಾನಗೊಂಡ ಪೊಲೀಸರು ಕ್ಯಾಶಿಯರ್ ನನ್ನೇ ತೀವ್ರ ವಿಚಾರಣೆಗೊಳಪಡಿಸಿದಾಗ ಆತ ನನಗೆ ಕೆಲವು ಕಮಿಟ್ ಮೆಂಟ್ ಗಳಿತ್ತು. ಅದರಿಂದ ಸುಳ್ಳು ವದಂತಿ ಹಬ್ಬಿಸಿದೆ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಬಂಕ್ ಮಾಲಿಕರು ಅವೇನೂ ಬೇಡ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: