Uncategorized

ಷೇರುದಾರರು ಅನ್ಯಾಯಕ್ಕೊಳಗಾಗಿದ್ದರೆ ಕುಂದು ಮಾಹಿತಿ ನೀಡಲು ಸೂಚನೆ

ಹಾಸನ (ಜು.12): ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ ಬೈರಗೊಂಡನಹಳ್ಳಿ ಗ್ರಾಮದಲ್ಲಿರುವ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರುದಾರರ ಸಹಿಯನ್ನು ನಕಲು ಮಾಡಿ ಸಂಘದಲ್ಲಿ ಅವ್ಯವಹಾರ ಮಾಡಿರುತ್ತಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಹಾಸನ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಬೈರಗೊಂಡನಹಳ್ಳಿ ಗ್ರಾಮದ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರುದಾರರಾಗಿರುವವರಿಗೆ ಇದುವರೆಗೆ ಯಾರಿಗಾದರೂ ಅನ್ಯಾಯವಾಗಿದ್ದರೆ ತುರ್ತಾಗಿ ಭ್ರಷ್ಟ್ರಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ನಂ.25. ಎನ್.ಜಿ.ಓ, ವಸತಿ ಗೃಹ, 1ನೇ ಮೈನ್, ಕಾವೇರಿ ರಸ್ತೆ, ಪಿ.ಡಬ್ಲ್ಯೂಡಿ ಕಾಲೀನಿ, ಹಾಸನ ದೂರವಾನಿ ಸಂಖ್ಯೆ 08172-266789,ಮೊ. 9480806278 ಗೆ ಖುದ್ದು ಹಾಜರಾಗಿ ತನಿಖಾಧಿಕಾರಿಯವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಭ್ರಷ್ಟ್ರಾಚಾರ ನಿಗ್ರಹ ದಳ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: