ಪ್ರಮುಖ ಸುದ್ದಿಮೈಸೂರು

ಆತ್ಮವಿಶ್ವಾಸದಿಂದ ಸಾಧನೆಯಡಿಗೆ ಮುಖಮಾಡಿ : ಕೆ.ಎಂ.ಗಾಯತ್ರಿ

ಮನಸ್ಸನ್ನು ಬ್ಲಾಕ್ ಮಾಡಿ ಓದುವ- ಬರೆಯುವ ಆಸಕ್ತಿಯನ್ನು ಮೊಬೈಲ್ ಕುಗ್ಗಿಸಲಿದ್ದು ಅದರಿಂದ ದೂರವಿರಿ

ಮೈಸೂರು.ಜ.16 :   ಎಸ್.ಎಸ್.ಎಲ್.ಸಿ ಮತ್ತು ಪಿಯು ನಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಗಳಿಸಿದ  ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು ಸನ್ಮಾನಿಸಿ ಪುರಸ್ಕರಿಸಲಾಯಿತು.

ಪ್ರಮತಿ ಹಿಲ್ ವ್ಯೂ ಸಂಸ್ಥಾಪಕ ಹೆಚ್. ವಿ.ರಾಜೀವ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಶೇ 90ರಷ್ಟು ಜನ ಓದುವುದೊಂದು ಬದುಕಿನ ವೃತ್ತಿಯೇ ಇನ್ನೊಂದು. ಶಿಕ್ಷಣವೆಂದರೆ ಡಾಕ್ಟರ್ ಇಂಜಿನಿಯರಿಂಗ್  ಮಾತ್ರವಲ್ಲದೇ ಇತರೆ ಸ್ಪರ್ಧಾತ್ಮಕ ‌ಪರೀಕ್ಷೆಗೂ ಗಮನಹರಿಸಿ. ಅಲ್ಲದೇ ಸಮಾಜದಿಂದ ಗೌರವಗಳಿಸಿರುವ ಪತ್ರಕರ್ತರಾಗಿಯೂ  ಸಮಾಜ ಸೇವೆ ಸಲ್ಲಿಸಿ, ಉನ್ನತ ಶಿಕ್ಷಣ ಎಂಬುದು ಸಾಮಾನ್ಯರಿಗೆ ಕಷ್ಟಸಾಧ್ಯವಾಗಿದ್ದು ಆದರಲ್ಲಿಯೂ ಕಡಿಮೆ ಆದಾಯವಿರುವ ಪತ್ರಕರ್ತರ ಮಕ್ಕಳಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ವಿದ್ಯಾಭ್ಯಾಸ ದೊರಕಿಸಿಕೊಟಬೇಕೆಂಬ ಅನಿಸಿಕೆ ವ್ಯಕ್ತಪಡಿಸಿದರು.

ಪತ್ರಕರ್ತರದು ವಿಭಿನ್ನ ರೀತಿಯ ಕಾರ್ಯವೈಖರಿಯಾಗಿದ್ದು ಇಂತಹ ಜೀವನ ಶೈಲಿಯಲ್ಲಿ ಮಕ್ಕಳನ್ನು ಪ್ರತಿಭಾವಂತರನ್ನಾಗಿಸುವಲ್ಲಿ ತಾಯಿಂದಿರ ಪಾತ್ರ ಹಿರಿಯದು ಎಂದು ಪ್ರಶಂಸಿದರು.

ಮೈಸೂರು ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ. ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರಿಸುವುದಷ್ಟೇ ಅಲ್ಲ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಬೇಕು.

ಮೊಬೈಲ್ ಮನಸ್ಸನ್ನು ಬ್ಲಾಕ್ ಮಾಡಲಿದ್ದು, ಕೇಳುವ ಹಾಗೂ ಓದುವ ತಾಳ್ಮೆಯಿರುವುದಿಲ್ಲ ಇದರಿಂದ ಮನಸ್ಸು ಹೆಚ್ಚು ಒತ್ತಡಕ್ಕೊಳಗಾಗುವುದರೊಂದಿಗೆ ಸಂಕುಚಿತ ಮನೋಭಾವ ಮೂಡಲಿದ್ದು. ಆದ್ದರಿಂದ ಅದರಿಂದ ದೂರವಿದ್ದು ಸಾಧನೆಯಡೆಗೆ ಮುಖಮಾಡಿ ಎಂದು ಆಶಿಸಿದರು.

ಪುರಸ್ಕೃತರು : ಪಿಯು ನಲ್ಲಿ ಎಂ.ಎಸ್.ಆದಿತ್ಯ ಕಶ‍್ಯಪ್(96%),.ನಯನಾ ಪ್ರಿಯ (93%),  ಐಮನ್ ಅಹಮದ್ ಖಾನ್ (85%). ಎಸ್.ಎಸ್.ಎಲ್.ಸಿಯಲ್ಲಿ ಕೆ.ದಾಮಿನಿ(96%),ಯೂಸರ್ ಸರೂರ್ ಖಾನ್(88%), ನಿತ್ಯ ಎಸ್.ಆರಾಧ್ಯ (84%),ಎಂ.ಸುಜನ (90%),ಎಚ್.ಎಸ್.ರಂಜಿತ (92%), ಪೂರ್ವಿಕ ಎಸ್.ಬೆನ್ನೂರು(94%) ಮತ್ತು ಎ.ಅಖಂಡೇಶ್ (79%) ಇವರುಗಳನ್ನು ಸನ್ಮಾನಿಸಲಾಯಿತು

ಪ್ರೇರಣಾ ಅಕಾಡೆಮಿಯ ಕಾರ್ಯದರ್ಶಿ ಪ್ರದೀಪ್. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಟುಂಬ ವರ್ಗದವರು ಸಮಾರಂಭಕ್ಕೆ ಸಾಕ್ಷಿಯಾದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: