ಮೈಸೂರು

ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮಾ ದಿನ ಆಚರಣೆ

ಮೈಸೂರು,ಜು.16:- ಮಹರ್ಷಿ ವಿದ್ಯಾಸಂಸ್ಥೆಯಲ್ಲಿಂದು  ಸಂಸ್ಥೆಯ ಗುರುವಿನ ಮಹತ್ವವನ್ನು ಸಾರುವ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಶಿಕ್ಷಣ ಮಂಡಲಿಯ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಶಂಕರಾನಂದ ಅವರು ಆದಿಗುರು ವ್ಯಾಸ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು  ಮಹರ್ಷಿ ವಿದ್ಯಾಸಂಸ್ಥೆಯ   ಮಕ್ಕಳ ಬೆಳವಣಿಗೆ ಶಿಕ್ಷಕರ ಮತ್ತು ತಂದೆ ತಾಯಿಯರ ಮಹತ್ತರ ಕಾರ್ಯ ಮತ್ತು ಸಾಧನೆಯನ್ನು ಸ್ಮರಿಸಿ, ಗುರು ಎಂಬುದರ ಮಹತ್ವವನ್ನು ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು. ಶಾಲಾ ಮಕ್ಕಳಿಂದ ಸ್ವಾಗತ ಮತ್ತು ವಂದನಾರ್ಪಣೆ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಸಂಸ್ಥೆಯ ಪಬ್ಲಿಕ್ ಶಾಲೆಯ ಹಿರಿಯ ಪ್ರಾಚಾರ್ಯರಾದ ಗೋಪಾಲಸ್ವಾಮಿ, ಕಾಲೇಜು ವಿಭಾಗದ ಪ್ರಾಚಾರ್ಯರಾದ ಮಹದೇವಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾರಾದ, ವಿ. ಗಿರೀಶ್  ಮತ್ತು  ಪ್ರಾಥಮಿಕ ಶಾಲಾವಿಭಾಗದ ಮುಖ್ಯೋಪಾಧ್ಯಾಯನಿ  ವಾಣಿಶ್ರೀ ಹಾಗೂ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಬೋಧಕ/ಕೇತರ ಸಿಬ್ಬಂದಿಗಳು, ವಿದ್ಯಾರ್ಥಿ/ನಿಯರು, ಪೋಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. (ಎಸ್.ಎಚ್)

Leave a Reply

comments

Related Articles

error: