ಪ್ರಮುಖ ಸುದ್ದಿಮೈಸೂರು

ಎಂ.ಖಾನ್ ಫ್ಯಾಶನ್ ವರ್ಲ್ಡ್ ಕಂಪನಿ ಕಾರ್ಮಿಕರ ಭವಿಷ್ಯ ನಿಧಿ ಬಿಡುಗಡೆಗೆ ಆದೇಶ

ಮೈಸೂರು,ಜು.16 : ಬೆಳವಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಎಂ.ಖಾನ್ ಫ್ಯಾಶನ್ ವರ್ಲ್ಡ್ ಪ್ರೈ.ಲಿ ನ ನಲ್ಲಿ ಕೆಲಸ ಮಾಡುತ್ತಿದ್ದ 300 ಜನ ಕಾರ್ಮಿಕರಿಗೆ ಸಂದಾಯವಾಗಬೇಕಿರುವ ಭವಿಷ್ಯ ನಿಧಿ ಬಾಕಿಯನ್ನು ಮುಂದಿನ 15 ದಿನಗಳೊಳಗೆ ಸಂದಾಯ ಮಾಡವಂತೆ ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾರ್ಮಿಕರ ವೇತನದಲ್ಲಿ ಭವಿಷ್ಯ ನಿಧಿ ವಂತಿಗೆಯನ್ನು ಕಡಿತಗೊಳಿಸಿ ಕಳೆದ ನಾಲ್ಕು ರ್ವಷಗಳಿಂದಲೂ ಕಾರ್ಮಿಕರ ಭವಿಷ್ಯ ಖಾತೆಗೆ ಜಮೆ ಮಾಡದೆ ಇರುವ ಆಡಳಿತ ವರ್ಗದವರ ಕ್ರಮ ಪ್ರಶ್ನಿಸಿದಾಗ, ಆಡಳಿತ ವರ್ಗದವರು ಕಾರ್ಮಿಕರಿಗೆ ಸಂದಾಯ ಮಾಡಬೇಕಿರುವ ಭವಿಷ್ಯನಿಧಿ ಮೊತ್ತ ರೂ.2.46,32,124 ಗಳನ್ನು ತಪ್ಪಿಸುವ ಉದ್ದೇಶದಿಂದ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿ 300 ಜನ ಕಾರ್ಮಿಕರನ್ನು ಬೀದಿ ಪಾಲು ಮಾಡಿತ್ತು. ಕಂಪನಿಯ ಈ ಕ್ರಮವನ್ನು ಪ್ರಶ್ನಿಸಿ ಮೈಸೂರು ಜಿಲ್ಲಾ ಗಾರ್ಮೆಂಟ್ಸ್ ನೌಕರರ ಸಂಘದ ಅಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್ ಭವಿಷ್ಯನಿಧಿ ಪ್ರಾದೇಶಿಕ ಆಯುಕ್ತರಲ್ಲಿ ಪ್ರಕರಣ ದಾಖಲು ಮಾಡಿದರು.

ವಿಚಾರಣೆ ನಡೆಸಿ ಕಳೆದ 2014ರ ಸೆಪ್ಟೆಂಬರ್ ನಿಂದ 2018ರ ಅವಧಿಗೆ ಕಾರ್ಮಿಕರಿಗೆ ಸಂದಾಯವಾಗಬೇಕಿರುವ ಭವಿಷ್ಯ ನಿಧಿ ಮೊತ್ತ ಬಿಡುಗಡೆಗೊಳಿಸಬೇಕೆಂದು ತೀರ್ಪು ನೀಡಿದ್ದು,  ಈ ತೀರ್ಪು ಬಡ ಕಾರ್ಮಿಕರಿಗೆ ಸಂದ ನ್ಯಾಯವೆಂದು ಸಂಘವು ಸ್ವಾಗತಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: