ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣಾ ಶಿಬಿರ ನಾಳೆ

ಮೈಸೂರು,ಜು.16 : ಶ್ರೀರಾಂಪುರದ ಸಾಯಿರಾಂ ಪಾಲಿ ಕ್ಲಿನಿಕ್ ಹಾಗೂ ಭಾನವಿ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಜು.17ರ ಮಧ್ಯಾಹ್ನ 3 ಗಂಟೆಗೆ ದೇವಯ್ಯನ ಹುಂಡಿಯ ಸಾಯಿರಾಂ ಪಾಲಿ ಕ್ಲಿನಿಕ್ ಶಾಸಕ ಎಸ್.ಎ.ರಾಮದಾಸ್ ಶಿಬಿರಕ್ಕೆ ಚಾಲನೆ ನೀಡುವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಹಾಜರಿರಲಿದ್ದಾರೆ.

ಭಾನವಿ ಆಸ್ಪತ್ರೆ ನಿರ್ದೇಶಕ ಡಾ.ವಿಜಯ್ ಸಿ ಚೆಲುವರಾಜ್ ಹಾಗೂ ಇತರ ತಜ್ಞ ವೈದ್ಯರು ಸಲಹೆ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: