ಮೈಸೂರು

ಮೂರು ಕಣ್ಣು, ಎರಡು ಮೂಗಿರುವ ವಿಚಿತ್ರ ಕರು ಜನನ

ಮೂರು ಕಣ್ಣು, ಎರಡು ಮೂಗಿರುವ ವಿಚಿತ್ರ ಹೆಣ್ಣು ಕರುವೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನೀಲನಹಳ್ಳಿಯಲ್ಲಿ ಜನಿಸಿದೆ.

ಗ್ರಾಮದ ದೇವರಾಜು ಎಂಬ ರೈತರೋರ್ವರು ಒಂದು ವರ್ಷದ ಹಿಂದೆ ಹಸುವೊಂದನ್ನು ಕೊಂಡು ತಂದಿದ್ದರು. ಇದೀಗ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಆ ಕರು ಬೇರೆಲ್ಲ ಕರುಗಳಿಗಿಂತ ಭಿನ್ನವಾಗಿದೆ. ಈ ಕರುವಿಗೆ ಮೂರು ಕಣ್ಣುಗಳು, ಎರಡು ಮೂಗು ಇದೆ. ಮುಖದ ಎರಡೂ ಬದಿ ಮತ್ತು, ಹಣೆಯ ಮಧ್ಯಭಾಗದಲ್ಲಿ ಕಣ್ಣಿದೆ. ಕರು ಆರೋಗ್ಯವಾಗಿದ್ದು ಅದರ ತಾಯಿ ಕೂಡ ಸುಮಾರು ಆರು ಲೀಟರ್‍ನಷ್ಟು ಹಾಲು ನೀಡುತ್ತಿದೆ.ಮೂರು ಕಣ್ಣುಗಳಿರುವ ಕರು ಜನಿಸಿದ ವಿಷಯ ತಿಳಿದ ಗ್ರಾಮಸ್ಥರು, ರೈತ ದೇವರಾಜು ಅವರ ಮನೆಗೆ ಬಂದು ಕರುವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇನ್ನು ತಮ್ಮ ಮನೆಯಲ್ಲಿ ಜನಿಸಿರುವ ಮೂರು ಕಣ್ಣುಗಳಿರುವ ಕರುವನ್ನು ಸ್ವಲ್ಪ ದಿನ ಸಾಕಿ, ಆ ನಂತರ ಯಾವುದಾದರೂ ದೇವಸ್ಥಾನಕ್ಕೆ ದಾನ ಮಾಡುತ್ತೇವೆ ಎಂದು ಕರುವಿನ ಮಾಲೀಕ ದೇವರಾಜು ತಿಳಿಸಿದ್ದಾರೆ.

Leave a Reply

comments

Related Articles

error: