ಪ್ರಮುಖ ಸುದ್ದಿ

ಜುಲೈ 19 : ಪಹಣಿ ಗಣಕೀಕೃತ ಆರ್ ಟಿ ಸಿ ತಿದ್ದುಪಡಿ ಆಂದೋಲನ ಕಂದಾಯ ಆದಾಲತ್

ಜುಲೈ 19 : ಪಹಣಿ ಗಣಕೀಕೃತ ಆರ್ ಟಿ ಸಿ ತಿದ್ದುಪಡಿ ಆಂದೋಲನ ಕಂದಾಯ ಆದಾಲತ್
ರಾಜ್ಯ(ಮಂಡ್ಯ)ಜು.17:-  ಮಂಡ್ಯ ತಾಲೂಕು ಕೆರಗೋಡು ಹೋಬಳಿ (2)ನೇ ವೃತ್ತ ಆಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೊನಗಳ್ಳಿಮಠ ಇನಾಂ ಗ್ರಾಮವಾಗಿದ್ದು ಸದರಿ ಗ್ರಾಮದಲ್ಲಿ ತಹಲ್‍ವರೆವಿಗೂ ಗಣಕೀಕೃತ ಆರ್‍ಟಿಸಿ ಆಗಿರುವುದಿಲ್ಲ ಪ್ರಸ್ತುತ ಕೈ ಬರವಣಿಗೆ ಚಾಲ್ತಿಯಲ್ಲಿರುತ್ತದೆ.
ಜುಲೈ 19 ರಂದು ಬೆಳಿಗ್ಗೆ 10.30 ಕ್ಕೆ ಹೊನಗಳ್ಳಿಮಠ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಪಹಣಿ ಗಣಕೀಕೃತ ಆರ್‍ಟಿಸಿ ತಿದ್ದುಪಡಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅದಕ್ಕಾಗಿ  ಸಂಬಂಧಪಟ್ಟ ಖಾತೆದಾರರು ಮಂಡ್ಯ ತಾಲೂಕು ಚೆನ್ನಂಕೇಗೌಡನದೊಡ್ಡಿ, ಹನಕೆರೆ, ಮುದ್ದುಂಗೆರೆ ಹಾಗೂ ಮದ್ದೂರು ತಾಲೂಕಿನ ಸೊಳ್ಳೆಪುರ, ವಳಗೆರಹಳ್ಳಿ, ಗೆಜ್ಜಲಗೆರೆ ಗ್ರಾಮದ ಗ್ರಾಮಗಳಲ್ಲಿ ಪಹಣಿ ಖಾತೆದಾರರಿದ್ದು, ಎಲ್ಲಾ ಖಾತೆದಾರರು ಹಾಗೂ ರೈತಬಾಂಧವರು ತಮ್ಮ ಪಹಣಿಗಳಿಗೆ ಸಂಬಂಧಪಟ್ಟಂತೆ ಹಕ್ಕು ಬದಲಾವಣೆಯಾಗಿರುವ ಕುರಿತಂತೆ ತಮ್ಮಲ್ಲಿರುವ ದಾಖಲಾತಿಗಳೊಂದಿಗೆ ಜುಲೈ 19 ರಂದು ನಡೆಯುವ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಹಾಜರಾಗಿ ಗಣಕೀಕೃತ ಆರ್‍ಟಿಸಿಗೆ ತಿದ್ದುಪಡಿ ಬದಲಾವಣೆ ಮಾಡಿಕೊಳ್ಳಬಹುದೆಂದು ಮಂಡ್ಯ ತಾಲೂಕು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: