ಮೈಸೂರು

ದಿ- ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಪಿ.ರಾಜೇಶ್ವರಿ ಅವಿರೋಧ ಆಯ್ಕೆ

ಮೈಸೂರು,ಜು.17:- ನಗರದ ಗಾಂಧಿ ಚೌಕದ ದಿ- ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಪಿ.ರಾಜೇಶ್ವರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಬ್ಯಾಂಕಿನ ಅಧ್ಯಕ್ಷ ರಾದ ಎಸ್ .ಬಿ.ಎಂ ಮಂಜು ಮಾತನಾಡಿ, ಈ ಹಿಂದೆ ಉಪಾಧ್ಯಕ್ಷ ರಾಗಿದ್ದ ಭಾಗ್ಯಮ್ಮ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಿರ್ದೇಶಕ ರೆಲ್ಲರೂ ಸರ್ವಾನುಮತದಿಂದ ರಾಜೇಶ್ವರಿ ಅವರನ್ನು ಆಯ್ಕೆ ಮಾಡಿದ್ದಾರೆ. ನಾಲ್ವಡಿಯವರಿಂದ ಸ್ಥಾಪನೆಗೊಂಡ ಇತಿಹಾಸ ಪ್ರಸಿದ್ಧ ಬ್ಯಾಂಕ್ ಇದಾಗಿದ್ದು, ಇದೇ ತಿಂಗಳ 28 ರಂದು ಬ್ಯಾಂಕಿನ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಸದಸ್ಯರೆಲ್ಲರೂ ಆಗಮಿಸಿ ಬ್ಯಾಂಕಿನ ಅಭಿವೃದ್ಧಿ ಕುರಿತ ಸಲಹೆ ಸೂಚನೆ ನೀಡಬಹುದಾಗಿದೆ ಎಂದು ಹೇಳಿದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ವರಿ ಮಾತನಾಡಿ ನನ್ನ ಆಯ್ಕೆಗೆ ಶ್ರಮಿಸಿದ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಅಭಿವೃದ್ಧಿ ಗೆ ಶ್ರಮಿಸಲಾಗುವುದು ಎಂದರು.

ನಿರ್ದೇಶಕರಾದ ಪೈ. ಚಿಕ್ಕಪುಟ್ಟಿ, ಕೆ.ಊಮಾಶಂಕರ್,ಬಿ.ಕೆ.ಪ್ರಕಾಶ, ಚಂದ್ರಶೇಖರ್, ರವಿಕುಮಾರ್,   ಭಾಗ್ಯಮ್ಮ , ಪ್ರಭಾರ ಕಾರ್ಯದರ್ಶಿ ಎಸ್.  ಗಾಯಿತ್ರಿ, ಚುನಾವಣಾಧಿಕಾರಿ ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು

28 ಕ್ಕೆ ಸರ್ವ ಸದಸ್ಯರ ಸಭೆ  ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: