ಮೈಸೂರು

ಮಾನವ ಕಲ್ಯಾಣ ಎಲ್ಲದರ ಆಶಯವಾಗಬೇಕು : ಪ್ರೊ.ಮಲೆಯೂರು ಗುರುಸ್ವಾಮಿ

ಪ್ರಪಂಚ ಸಂಪತ್ತಿನ ಬೆನ್ನಟ್ಟಿದ್ದು, ಇದು ಅಪಾಯಕಾರಿ ಬೆಳವಣಿಗೆ. ಇದಕ್ಕೆ ಬದಲಾಗಿ ಸಂಸ್ಕೃತಿಯ ಮೂಲ ಆಶಯದಂತೆ ಮಾನವ ಕಲ್ಯಾಣ ಎಲ್ಲದರ ಆಶಯವಾಗಬೇಕು ಎಂದು ಪ್ರೊ.ಮಲೆಯೂರು ಗುರುಸ್ವಾಮಿ ತಿಳಿಸಿದರು.

ಶ್ರೀಶಿವರಾತ್ರೀಶ್ವರ ಮಂಗಳಮಂಟಪದಲ್ಲಿ ಸುತ್ತೂರು ನಾಡುಮಠದ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯಗಳಿಗೆ ಬರುವ ಆದಾಯ ಹಾಗೂ ಅದರಿಂದ ಲಭ್ಯವಾಗುವ ಸಂಪತ್ತಿನ ಆಸೆಯಿಂದ  ಸಂಭವಿಸಿದ ಯುದ್ಧಗಳಿಂದ ಏನನ್ನೂ ಸಾಧಿಸಲಾಗಿಲ್ಲ ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಈಗ ಇಡೀ ವಿಶ್ವವೇ ಒಂದು ಕುಟುಂಬದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಿ.ನಟರಾಜು, ನಂಜನಗೂಡು ಕ್ಷೇತ್ರದ ಧಾರ್ಮಿಕ ದತ್ತಿ ಅಧಿಕಾರಿ ಜಯಪ್ರಕಾಶ್, ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: